Mohammed Siraj: ಡಿಎಸ್ಪಿ ಹುದ್ದೆಗೇರಿದ ಮೊಹಮ್ಮದ್ ಸಿರಾಜ್

11 october 2024

Pic credit: Google

ಪೃಥ್ವಿ ಶಂಕರ

Pic credit: Google

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಐತಿಹಾಸಿಕ ಗೆಲುವಿನ ನಂತರ ಆಟಗಾರರ ಮೇಲೆ ಬಹುಮಾನಗಳ ಸುರಿಮಳೆಯಾಗಿತ್ತು.

Pic credit: Google

ಅದರಂತೆ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಮೊಹಮ್ಮದ್ ಸಿರಾಜ್‌ಗೆ ತೆಲಂಗಾಣ ಸರ್ಕಾರ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿತ್ತು. ಅಲ್ಲದೆ, ಹೈದರಾಬಾದ್‌ನಲ್ಲಿ ಮನೆ ನಿರ್ಮಿಸಲು 600 ಚದರ ಗಜ ಭೂಮಿ ನೀಡಲು ನಿರ್ಧರಿಸಿತ್ತು.

Pic credit: Google

ಇದೀಗ ಮೊಹಮ್ಮದ್ ಸಿರಾಜ್​ರನ್ನು ತೆಲಂಗಾಣದ ಡಿಎಸ್ಪಿಯಾಗಿ ತೆಲಂಗಾಣ ಸರ್ಕಾರ ನೇಮಕ ಮಾಡಿದೆ. ಈ ಹೊಸ ಪಾತ್ರದೊಂದಿಗೆ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲಿದ್ದಾರೆ.

Pic credit: Google

2024 ರ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಮೊಹಮ್ಮದ್ ಸಿರಾಜ್ ತೆಲಂಗಾಣವನ್ನು ಪ್ರತಿನಿಧಿಸಿದ್ದ ಏಕೈಕ ಕ್ರಿಕೆಟಿಗರಾಗಿದ್ದರು.

Pic credit: Google

2024ರ ಟಿ20 ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ಒಟ್ಟು ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು.

Pic credit: Google

ಮೊಹಮ್ಮದ್ ಸಿರಾಜ್ 2017 ರಿಂದ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಟಿ20 ವಿಶ್ವಕಪ್ ಜೊತೆಗೆ ಟೀಂ ಇಂಡಿಯಾ ಪರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವನ್ನೂ ಆಡಿದ್ದಾರೆ.

Pic credit: Google

ಮೊಹಮ್ಮದ್ ಸಿರಾಜ್ ಇದುವರೆಗೆ ಟೀಂ ಇಂಡಿಯಾ ಪರ 29 ಟೆಸ್ಟ್, 44 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಅವರು ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.