IPL 2025: ಸೂರ್ಯನಿಗೆ ನಾಯಕತ್ವದ ಆಫರ್ ನೀಡಿತಾ ಕೆಕೆಆರ್?

24 August 2024

Pic credit: Google

ಪೃಥ್ವಿ ಶಂಕರ

Pic credit: Google

ಮುಂದಿನ ಆವೃತ್ತಿಯ ಐಪಿಎಲ್​ಗೂ ಮೊದಲು ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಎಲ್ಲಾ ತಂಡಗಳು ಅನೇಕ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡುತ್ತವೆ, ಅದರಲ್ಲಿ ಕೆಲವು ದೊಡ್ಡ ಆಟಗಾರರ ಹೆಸರುಗಳೂ ಸೇರಿವೆ.

Pic credit: Google

ಈ ನಡುವೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತದೆ ಮತ್ತು ಯಾರನ್ನು ಬಿಡುಗಡೆ ಮಾಡುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

Pic credit: Google

ಈ ನಡುವೆ ಸೂರ್ಯಕುಮಾರ್ ಯಾದವ್ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಅದರಂತೆ ಮುಂಬೈ ಫ್ರಾಂಚೈಸಿ ಸೂರ್ಯನನ್ನು ತಂಡದಿಂದ ಬಿಡುಗಡೆ ಮಾಡಿದರೆ, ಅವರು ಯಾವ ತಂಡವನ್ನು ಸೇರಲಿದ್ದಾರೆ ಎಂಬ ವದಂತಿ ಶುರುವಾಗಿದೆ.

Pic credit: Google

ವರದಿಯ ಪ್ರಕಾರ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವದ ಆಫರ್ ನೀಡಿದೆ ಎಂದು ವರದಿಯಾಗಿದೆ.

Pic credit: Google

ಸೂರ್ಯಕುಮಾರ್ ಯಾದವ್ 2018 ರಿಂದ ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿದ್ದಾರೆ. ಆದರೆ, ಅದಕ್ಕಿಂತ ಮೊದಲು ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದರು.

Pic credit: Google

ಸೂರ್ಯಕುಮಾರ್ ಯಾದವ್ 150 ಐಪಿಎಲ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇದರಲ್ಲಿ 2 ಶತಕ ಮತ್ತು 24 ಅರ್ಧ ಶತಕಗಳ ಸಹಾಯದಿಂದ 3594 ರನ್ ಗಳಿಸಿದ್ದಾರೆ.

Pic credit: Google

ಇತ್ತೀಚೆಗಷ್ಟೇ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ20 ತಂಡದ ನಾಯಕರನ್ನಾಗಿ ಮಾಡಲಾಗಿದೆ. ನಾಯಕನಾಗಿ ಸೂರ್ಯನಿಗೆ ಶುಭಾರಂಭ ಕೂಡ ಸಿಕ್ಕಿದೆ.