2025 ರ ಐಪಿಎಲ್ಗೂ ಮೊದಲು ಮೆಗಾ ಹರಾಜು ನಡೆಯಲಿದೆ. ರೋಹಿತ್ ಶರ್ಮಾ ಈ ಹರಾಜಿನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
Pic credit: Google
ಕಳೆದ ಸೀಸನ್ ಆರಂಭಕ್ಕೂ ಮುನ್ನ ಮಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿತ್ತು.
Pic credit: Google
ಹೀಗಾಗಿ ಮುಂದಿನ ಸೀಸನ್ ಆರಂಭಕ್ಕೂ ಮುನ್ನ ರೋಹಿತ್ ತಂಡವನ್ನು ತೊರೆಯಬಹುದು ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯ ಬಿಡುಗಡೆಯ ನಂತರವೇ ಈ ಬಗ್ಗೆ ಖಚಿತತೆ ಸಿಗಲಿದೆ.
Pic credit: Google
ಒಂದು ವೇಳೆ ರೋಹಿತ್ ತಂಡದಿಂದ ಬಿಡುಗಡೆಯಾದರೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ರೋಹಿತ್ ಶರ್ಮಾರನ್ನು ಖರೀದಿಸಲು ಅನೇಕ ಫ್ರಾಂಚೈಸಿಗಳು ಮುಗಿಬೀಳುವುದು ಖಚಿತ.
Pic credit: Google
ಈ ನಡುವೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್, ರೋಹಿತ್ ಶರ್ಮಾ ಹರಾಜಿನಲ್ಲಿ ಬಂದರೆ, ಅವರನ್ನು ಖರೀದಿಸಲು ಎಲ್‌ಎಸ್‌ಜಿ ಸಿದ್ಧವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ.
Pic credit: Google
ರೋಹಿತ್ ಎಷ್ಟು ಶ್ರೇಷ್ಠ ಆಟಗಾರರೆಂದರೆ ಪ್ರತಿ ತಂಡವು ಅವರನ್ನು ಖರೀದಿಸಲು ಸಂತೋಷಪಡುತ್ತದೆ ಎಂದು ಜಾಂಟಿ ರೋಡ್ಸ್ ಹೇಳಿದ್ದಾರೆ. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್, ರೋಹಿತ್ ಅವರನ್ನು ಖರೀದಿಸಲು 50 ಕೋಟಿ ರೂಪಾಯಿಗಳನ್ನು ಇಟ್ಟುಕೊಂಡಿದೆ ಎಂದು ವರದಿಯೊಂದು ಹೇಳಿತ್ತು.
Pic credit: Google
ರೋಹಿತ್ ಶರ್ಮಾ 2011 ರಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಈ ಅವಧಿಯಲ್ಲಿ, ನಾಯಕನಾಗಿ, ಅವರು ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದರು.
Pic credit: Google
ಐಪಿಎಲ್ 2022 ರ ಮೊದಲು ಮುಂಬೈ ತಂಡ ರೋಹಿತ್ ಅವರಿಗೆ 16 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಈ ಬಾರಿ ಅವರನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.