ಅದಾನಿ ಕೈತಪ್ಪಿದ ಗುಜರಾತ್ ಟೈಟಾನ್ಸ್ ಮಾಲೀಕತ್ವ; ಯಾರ ಪಾಲಾಯ್ತು ಚಾಂಪಿಯನ್ ತಂಡ?

13 september 2024

Pic credit: Google

ಪೃಥ್ವಿ ಶಂಕರ

Pic credit: Google

ಐಪಿಎಲ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ತಂಡದ ಮಾಲೀಕರು ಬದಲಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

Pic credit: Google

ಗುಜರಾತ್​ನ ಕಂಪನಿ ಟೊರೆಂಟ್ ಗ್ರೂಪ್ ಈ ತಂಡವನ್ನು ಖರೀದಿಸಿದೆ ಎಂದು ಹೇಳಲಾಗುತ್ತಿದ್ದು, ಎಷ್ಟು ಮೊತ್ತಕ್ಕೆ ಈ ತಂಡವನ್ನು ಖರೀದಿಸಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

Pic credit: Google

ವರದಿಗಳ ಪ್ರಕಾರ, ಗೌತಮ್ ಅದಾನಿ ಕೂಡ ಗುಜರಾತ್ ಟೈಟಾನ್ಸ್ ತಂಡವನ್ನು ಖರೀದಿಸುವ ರೇಸ್‌ನಲ್ಲಿದ್ದರು ಆದರೆ ಅಂತಿಮವಾಗಿ ಟೊರೆಂಟ್ ಗ್ರೂಪ್ ಈ ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.

Pic credit: Google

ಟೊರೆಂಟ್ ಒಂದು ಫಾರ್ಮಾ ಕಂಪನಿಯಾಗಿದ್ದು, ಇದರ ಮೌಲ್ಯ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಎಂದು ವರದಿಯಾಗಿದೆ.

Pic credit: Google

ಗುಜರಾತ್ ಟೈಟಾನ್ಸ್ ತಂಡವನ್ನು 2021 ರಲ್ಲಿ ಸಿವಿಸಿ ಗ್ರೂಪ್ 5625 ಕೋಟಿಗೆ ಖರೀದಿಸಿತು. ಆದರೆ ಈಗ ಈ ತಂಡದ ಮೌಲ್ಯವು 8 ಸಾವಿರ ಕೋಟಿ ರೂ. ಆಗಿದೆ.

Pic credit: Google

ಗುಜರಾತ್ ಟೈಟಾನ್ಸ್ ತನ್ನ ಮೊದಲ ಸೀಸನ್​ಲಿಯೇ ಐಪಿಎಲ್ ಚಾಂಪಿಯನ್ ಆಗಿತ್ತು. ಎರಡನೇ ಸೀಸನ್​ನಲ್ಲೂ ಫೈನಲ್ ತಲುಪಿತ್ತು.