ತ್ರಿಶತಕ ಪೂರೈಸಲು ಜಡೇಜಾಗೆ ಬೇಕು ಕೇವಲ 6 ವಿಕೆಟ್

12 september 2024

Pic credit: Google

ಪೃಥ್ವಿ ಶಂಕರ

Pic credit: Google

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯವು ಸೆಪ್ಟೆಂಬರ್ 19 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.

Pic credit: Google

ಈ ಸರಣಿಯಲ್ಲಿ, ಎರಡೂ ತಂಡಗಳ ಅನೇಕ ಅನುಭವಿ ಆಟಗಾರರು ವಿಶೇಷ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದು, ಇದರಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ದಾಖಲೆಯ ಸಮೀಪದಲ್ಲಿದ್ದಾರೆ.

Pic credit: Google

ಈ ಸರಣಿಯ ವೇಳೆ ರವೀಂದ್ರ ಜಡೇಜಾ 6 ವಿಕೆಟ್ ಕಬಳಿಸಿದರೆ, ಭಾರತದಲ್ಲೇ ಯಾರೂ ಮಾಡದ ವಿಶೇಷ ದಾಖಲೆಯನ್ನು ತಮ್ಮ ಹೆಸರಲ್ಲಿ ಬರೆಯಲಿದ್ದಾರೆ.

Pic credit: Google

ಜಡೇಜಾ 6 ವಿಕೆಟ್‌ಗಳನ್ನು ಪಡೆದ ತಕ್ಷಣ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದು, ಈ ಮೈಲಿಗಲ್ಲನ್ನು ತಲುಪಿದ ಭಾರತದ ಮೊದಲ ಎಡಗೈ ಸ್ಪಿನ್ನರ್ ಮತ್ತು ವಿಶ್ವದ ಮೂರನೇ ಆಟಗಾರನಾಗಲಿದ್ದಾರೆ.

Pic credit: Google

ಜಡೇಜಾಗೂ ಮೊದಲು, ಶ್ರೀಲಂಕಾದ ರಂಗನಾ ಹೆರಾತ್ (433) ಮತ್ತು ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ (362) ಕೇವಲ ಇಬ್ಬರು ಮಾಜಿ ಎಡಗೈ ಸ್ಪಿನ್ನರ್‌ಗಳು 300 ಟೆಸ್ಟ್ ವಿಕೆಟ್‌ ಪಡೆದ ದಾಖಲೆ ಮಾಡಿದ್ದರು.

Pic credit: Google

ರವೀಂದ್ರ ಜಡೇಜಾ ಇದುವರೆಗೆ 72 ಟೆಸ್ಟ್‌ಗಳಲ್ಲಿ 294 ವಿಕೆಟ್‌ಗಳನ್ನು ಪಡೆದಿದ್ದು, ಭಾರತದಲ್ಲಿ ಈ ಸರಣಿ ನಡೆಯಲಿರುವುದರಿಂದ ಒಂದೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡುತ್ತಾರೋ ಅಥವಾ ದೀರ್ಘ ಕಾಲ ಕಾಯಬೇಕೋ ಕಾದು ನೋಡಬೇಕಿದೆ.