ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದ ಐವರು ಸ್ಟಾರ್ ಆಟಗಾರರು

27 November 2024

Pic credit: Google

ಪೃಥ್ವಿ ಶಂಕರ

Pic credit: Google

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಬಲಿಷ್ಠ ತಂಡಗಳನ್ನು ಕಟ್ಟುವಲ್ಲಿ ಯಶಸ್ವಿಯಾಗಿವೆ.

Pic credit: Google

Pic credit: Google

ಈ ಹರಾಜಿನಲ್ಲಿ ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ರೂಪಾಯಿಗಳಿಗೆ ಖರೀದಿಸಿತು. ಈ ಮೂಲಕ ಪಂತ್, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು.

Pic credit: Google

Pic credit: Google

ಪಂತ್ ಹೊರತಾಗಿ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂ.ಗೆ ಹಾಗೂ ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ 23.75 ಕೋಟಿ ರೂ.ಗೆ ಖರೀದಿಸಿತು. ಅರ್ಷದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಹಾಲ್ ತಲಾ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡರು.

Pic credit: Google

Pic credit: Google

ಇದೆಲ್ಲದರ ನಡುವೆಯೂ ಕ್ರಿಕೆಟ್​ ಲೋಕದ ಹಲವು ದಿಗ್ಗಜ ಕ್ರಿಕೆಟಿಗರು ಮಾರಾಟವಾಗದೆ ಉಳಿದವರು. ಅವರಲ್ಲಿ ಐವರ ಪಟ್ಟಿ ಇಲ್ಲಿದೆ.

Pic credit: Google

Pic credit: Google

ಇದರಲ್ಲಿ ಮೊದಲ ಹೆಸರು ಪೃಥ್ವಿ ಶಾ ಅವರದ್ದು, ಮೆಗಾ ಹರಾಜಿಗೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಿದ್ದಿದ್ದ ಪೃಥ್ವಿ,75 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದರು. ಅದರೆ ಅವರನ್ನು ಖರೀದಿಸಲು ಯಾವ ತಂಡವೂ ಆಸಕ್ತಿ ತೋರಲಿಲ್ಲ.

Pic credit: Google

Pic credit: Google

ಈ ಪಟ್ಟಿಯಲ್ಲಿ ಎರಡನೇ ಆಶ್ಚರ್ಯಕರ ಹೆಸರು ಡೇವಿಡ್ ವಾರ್ನರ್ ಅವರದು. ಆಸ್ಟ್ರೇಲಿಯಾದ ಈ ಸ್ಫೋಟಕ ಆಟಗಾರನನ್ನು ಯಾರು ಖರೀದಿಸಲಿಲ್ಲ.

Pic credit: Google

Pic credit: Google

ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಜಾನಿ ಬೈರ್‌ಸ್ಟೋವ್ ಕೂಡ ಯಾವುದೇ ಖರೀದಿದಾರರನ್ನು ಹುಡುಕಲಿಲ್ಲ.

Pic credit: Google

Pic credit: Google

ಭಾರತದ ಸ್ಟಾರ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಕೂಡ ಈ ಸೀಸನ್​ನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. 2 ಕೋಟಿ ಮೂಲ ಬೆಲೆಯೊಂದಿಗೆ ಮೆಗಾ ಹರಾಜಿಗೆ ಬಂದಿದ್ದ ಅವರನ್ನು ಯಾವ ತಂಡವೂ ಖರೀದಿಸಲು ಆಸಕ್ತಿ ತೋರಿಸಲಿಲ್ಲ.

Pic credit: Google

Pic credit: Google

ಇಂಗ್ಲೆಂಡ್‌ನ ಲೆಜೆಂಡರಿ ಬೌಲರ್ ಜೇಮ್ಸ್ ಆಂಡರ್ಸನ್ ಕೂಡ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದಾಗ್ಯೂ, ಅವರನ್ನು ಸಹ ಯಾರೂ ಖರೀದಿಸಲಿಲ್ಲ.

Pic credit: Google