ಬುಮ್ರಾ ಯಾವ ದೇಶದಲ್ಲಿ ಎಷ್ಟು ಬಾರಿ 5 ವಿಕೆಟ್ ಪಡೆದಿದ್ದಾರೆ?

30 December 2024

Pic credit: Google

ಪೃಥ್ವಿ ಶಂಕರ

ಮೆಲ್ಬೋರ್ನ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಉರುಳಿಸಿದ ಬುಮ್ರಾ ಈ ಸರಣಿಯಲ್ಲಿ ಮೂರನೇ ಬಾರಿಗೆ 5 ವಿಕೆಟ್​ಗಳ ಗೊಂಚಲು ಪಡೆದರು.

Pic credit: Google

ಈ ಮೂಲಕ ಬುಮ್ರಾ ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 13 ನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ಅಥವಾ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದರು.

Pic credit: Google

ಇನ್ನು ಬುಮ್ರಾ ಯಾವ ದೇಶದಲ್ಲಿ ಹೆಚ್ಚು ಬಾರಿ 5 ವಿಕೆಟ್ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ.. ಬುಮ್ರಾ ಆಸ್ಟ್ರೇಲಿಯಾದಲ್ಲಿ ಗರಿಷ್ಠ 4 ಬಾರಿ 5 ಪ್ಲಸ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

Pic credit: Google

ಆಸ್ಟ್ರೇಲಿಯಾದ ನಂತರ ಬುಮ್ರಾ ದಕ್ಷಿಣ ಆಫ್ರಿಕಾದಲ್ಲಿ ಮೂರು ಬಾರಿ ಇನ್ನಿಂಗ್ಸ್‌ನಲ್ಲಿ 5 ಪ್ಲಸ್ ವಿಕೆಟ್‌ಗಳನ್ನು ಪಡೆದಿದ್ದಾರೆ.

Pic credit: Google

ಇಂಗ್ಲೆಂಡ್ ನೆಲದಲ್ಲಿ ಬುಮ್ರಾ ಎರಡು ಬಾರಿ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 5 ಪ್ಲಸ್ ವಿಕೆಟ್ ಪಡೆದ ಪವಾಡ ಮಾಡಿದ್ದಾರೆ.

Pic credit: Google

ವೆಸ್ಟ್ ಇಂಡೀಸ್‌ನಲ್ಲಿಯೂ ಈ ಮ್ಯಾಜಿಕ್ ಮಾಡಿರುವ ಬುಮ್ರಾ ಎರಡು ಬಾರಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.

Pic credit: Google

ಬುಮ್ರಾ ತವರು ಮೈದಾನದಲ್ಲಿಯೂ ಎರಡು ಬಾರಿ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 5 ಪ್ಲಸ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

Pic credit: Google