ಟಿ20ಯಿಂದ ನಿವೃತ್ತಿ ಯಾವಾಗ? ಮೌನ ಮುರಿದ ಜಸ್ಪ್ರೀತ್ ಬುಮ್ರಾ

06  July 2024

Pic credit - BCCI twitter

ಪೃಥ್ವಿಶಂಕರ

Pic credit -  BCCI

9ನೇ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇದರೊಂದಿಗೆ 17 ವರ್ಷಗಳ ಟಿ20 ವಿಶ್ವಕಪ್ ಟ್ರೋಫಿ ಬರವನ್ನು ತಂಡ ನೀಗಿಸಿಕೊಂಡಿದೆ.

ಚಾಂಪಿಯನ್

Pic credit -  BCCI

2024ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಅವರು ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಪಡೆದರು.

ಪಂದ್ಯಾವಳಿ ಆಟಗಾರ

Pic credit -  BCCI

ಅಗ್ರ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಬುಮ್ರಾ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.

2ನೇ ಸ್ಥಾನ

Pic credit -  BCCI

ಬುಮ್ರಾ ಈ ಆವೃತ್ತಿಯಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ 4.17 ರ ಅತ್ಯುತ್ತಮ ಎಕಾನಮಿಯೊಂದಿಗೆ 15 ವಿಕೆಟ್‌ಗಳನ್ನು ಪಡೆದರು.

15 ವಿಕೆಟ್

Pic credit -  BCCI

ಫೈನಲ್ ಪಂದ್ಯದ ನಂತರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಮ್ಮ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿದರು.

 ಮೂವರ ನಿವೃತ್ತಿ

Pic credit -  BCCI

ಹೀಗಾಗಿ ಗುರುವಾರ ನಡೆದ ವಿಜಯ ಪರೇಡ್‌ನ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ, ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಬಗ್ಗೆ ಬುಮ್ರಾ ಬಳಿ ಪ್ರಶ್ನೆ ಕೇಳಲಾಯಿತು.

 ನಿಮ್ಮದು ಯಾವಾಗ?

Pic credit -  BCCI

ಇದಕ್ಕೆ ಉತ್ತರಿಸಿದ ಬುಮ್ರಾ ‘ಅಂತಹ ಆಲೋಚನೆಗಳು ನನ್ನಿಂದ ತುಂಬಾ ದೂರವಿದೆ ಎಂದು ಸ್ಪಷ್ಟಪಡಿಸಿದರು.

 ಇನ್ನು ದೂರವಿದೆ

Pic credit -  BCCI

ಬುಮ್ರಾ, ‘ಇನ್ನೂ ಬಹಳ ದೂರ ಸಾಗಬೇಕಿದೆ. ನಾನು ಈಗಷ್ಟೇ ಆರಂಭಿಸಿದ್ದೇನೆ. ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ ಎಂದು ನನಗೆ ತುಂಬಾ ಸಂತೋಷವಾಗಿದೆ’ ಎಂದರು.

ಬುಮ್ರಾ ಸ್ಪಷ್ಟನೆ

Pic credit -  BCCI

ಇದರರ್ಥ ಬುಮ್ರಾ ಭಾರತ ಟಿ20 ತಂಡದಲ್ಲಿ ಇನ್ನು ಸಾಕಷ್ಟು ವರ್ಷ ಆಡಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಇನ್ನು ಆಡಲಿದ್ದಾರೆ