52 ವರ್ಷಗಳ ಹಳೆಯ ದಾಖಲೆ ಮುರಿಯುವ ಹೊಸ್ತಿಲಿನಲ್ಲಿ ಬುಮ್ರಾ

02 January 2025

Pic credit: Google

ಪೃಥ್ವಿ ಶಂಕರ

ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಕೆಟ್​ಗಳ ಮೂಟೆ ಕಟ್ಟುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಬುಮ್ರಾ ಪಡೆಯುವ ವಿಕೆಟ್​ಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

Pic credit: Google

ಈ ಮೂಲಕ ಬುಮ್ರಾ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

Pic credit: Google

ಇದುವರೆಗೆ ನಾಲ್ಕು ಪಂದ್ಯಗಳ ಎಂಟು ಇನ್ನಿಂಗ್ಸ್‌ಗಳಲ್ಲಿ ಬುಮ್ರಾ ಕೇವಲ 2.72 ರ ಎಕನಾಮಿಯಲ್ಲಿ 30 ವಿಕೆಟ್‌ಗಳನ್ನು ಪಡೆದಿದ್ದಾರೆ.

Pic credit: Google

ಇವುಗಳಲ್ಲಿ ಮೂರು ಬಾರಿ ಐದು ವಿಕೆಟ್ ಪಡೆದ ಸಾಧನೆಯೂ ಸೇರಿದೆ. ಇದೀಗ ಸಿಡ್ನಿ ಟೆಸ್ಟ್‌ನಲ್ಲೂ ಬುಮ್ರಾ ತಮ್ಮ ವಿಕೆಟ್ ಬೇಟೆಯನ್ನು ಮುಂದುವರೆಸಿದರೆ 52 ವರ್ಷಗಳ ಹಳೆಯ ದಾಖಲೆ ಮುರಿಯಲಿದ್ದಾರೆ.

Pic credit: Google

ಸಿಡ್ನಿ ಟೆಸ್ಟ್‌ನಲ್ಲಿ ಬುಮ್ರಾ ಭಾರತದ ಮಾಜಿ ಸ್ಪಿನ್ನರ್ ಬಿಎಸ್ ಚಂದ್ರಶೇಖರ್ ಅವರ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ

Pic credit: Google

ಚಂದ್ರಶೇಖರ್ 1972-73ರಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ 35 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

Pic credit: Google

ಪ್ರಸ್ತುತ 30 ವಿಕೆಟ್ ಪಡೆದಿರುವ ಬುಮ್ರಾ ಸಿಡ್ನಿಯಲ್ಲಿ ಇನ್ನ ಕೇವಲ 5 ವಿಕೆಟ್ ಪಡೆದರೆ  ಬಿಎಸ್ ಚಂದ್ರಶೇಖರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.

Pic credit: Google

ಇದಲ್ಲದೆ, ಬುಮ್ರಾ ಮೂರು ವಿಕೆಟ್‌ಗಳನ್ನು ಕಬಳಿಸಿದರೆ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಭಾರತದ ವೇಗಿಯೊಬ್ಬ ಪಡೆದ ಅತ್ಯಧಿಕ ವಿಕೆಟ್​ಗಳ ವಿಚಾರದಲ್ಲಿ ಕಪಿಲ್ ದೇವ್ (32) ಅವರ ದಾಖಲೆಯನ್ನು ಮುರಿಯಲಿದ್ದಾರೆ.

Pic credit: Google