18 ವಿವಿಧ ತಂಡಗಳ ಪರ ಕಣಕ್ಕಿಳಿದು ಮೊದಲ ಬಾರಿಗೆ ಚಾಂಪಿಯನ್
21 December 2024
Pic credit: Google
ಪೃಥ್ವಿ ಶಂಕರ
ಚೊಚ್ಚಲ ನೇಪಾಳ ಪ್ರೀಮಿಯರ್ ಲೀಗ್ 2024 ರ ಫೈನಲ್ ಪಂದ್ಯವು ಫಾರ್ ವೆಸ್ಟ್ ರಾಯಲ್ಸ್ ಮತ್ತು ಜನಕ್‌ಪುರ್ ಬೋಲ್ಟ್ಸ್ ತಂಡಗಳ ನಡುವೆ ನಡೆಯಿತು.
Pic credit: Google
ಈ ಪಂದ್ಯದಲ್ಲಿ ಜನಕಪುರ ಬೋಲ್ಟ್ಸ್ ತಂಡವು ಫಾರ್ ವೆಸ್ಟ್ ರಾಯಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಈ ಲೀಗ್‌ನ ಮೊದಲ ಚಾಂಪಿಯನ್ ಆಯಿತು.
Pic credit: Google
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಫಾರ್ ವೆಸ್ಟ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.
Pic credit: Google
ಈ ಗುರಿಯನ್ನು ಜನಕ್‌ಪುರ ಬೋಲ್ಟ್ಸ್ ಕೇವಲ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಸಾಧಿಸಿತು. 87 ರನ್‌ಗಳ ಇನಿಂಗ್ಸ್ ಆಡಿದ ಲಹಿರು ಮಿಲಂತ ಈ ಗೆಲುವಿನ ಹೀರೋ ಎನಿಸಿಕೊಂಡರು.
Pic credit: Google
ಈ ಪ್ರಶಸ್ತಿಯು ಜನಕ್‌ಪುರ ಬೋಲ್ಟ್ಸ್ ಆಟಗಾರ ಜೇಮ್ಸ್ ನೀಶಮ್‌ಗೆ ವಿಶೇಷವಾಗಿತ್ತು. ಏಕೆಂದರೆ ನೀಶಮ್‌ಗೆ ಇದು ಚೊಚ್ಚಲ ಟಿ20 ಟೂರ್ನಿಯ ಪ್ರಶಸ್ತಿ ಆಗಿತ್ತು.
Pic credit: Google
ನ್ಯೂಜಿಲೆಂಡ್ ಕ್ರಿಕೆಟಿಗ ಜೇಮ್ಸ್ ನೀಶಮ್ ಇದುವರೆಗೆ 18 ವಿವಿಧ ತಂಡಗಳಿಗಾಗಿ ಟಿ20 ಕ್ರಿಕೆಟ್ ಆಡಿದ್ದಾರೆ. ಈ ಮೊದಲು ಯಾವುದೇ ತಂಡದೊಂದಿಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
Pic credit: Google
ಜೇಮ್ಸ್ ನೀಶಮ್ ನ್ಯೂಜಿಲೆಂಡ್ ಪರ 12 ಟೆಸ್ಟ್, 76 ಏಕದಿನ ಮತ್ತು 79 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೇ ಇದುವರೆಗೆ ಒಟ್ಟು 282 ಟಿ20 ಪಂದ್ಯಗಳನ್ನು ಆಡಿದ್ದಾರೆ.
Pic credit: Google
Pic credit: Google
Pic credit: Google
Pic credit: Google
ಕಾಂಬ್ಳಿಗಿಂತ ದುಪ್ಪಟ್ಟು ಪಿಂಚಣಿ ಪಡೆಯುವ ಸಚಿನ್ ತೆಂಡೂಲ್ಕರ್