5 ಪಂದ್ಯ 542 ರನ್; ಆದರೂ ಕರುಣ್​ಗೆ ಟೀಂ ಇಂಡಿಯಾದಲ್ಲಿಲ್ಲ ಸ್ಥಾನ

08 January 2025

Pic credit: Google

ಪೃಥ್ವಿ ಶಂಕರ

ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಜನವರಿ 12 ರೊಳಗೆ ಪ್ರಕಟಿಸಲಾಗುವುದು. ಆದರೆ, ದೇಶೀ ಟೂರ್ನಿಯಲ್ಲಿ 542 ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರನಿಗೆ ಅವಕಾಶ ಸಿಗುತ್ತದೆಯೇ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

Pic credit: Google

542 ರ ಬ್ಯಾಟಿಂಗ್ ಸರಾಸರಿ ಹೊಂದಿರುವ ಈ ಬ್ಯಾಟ್ಸ್‌ಮನ್ ಬೇರ್ಯಾರು ಅಲ್ಲ. ನಮ್ಮ ಕನ್ನಡದ ಕರುಣ್ ನಾಯರ್, ಅವರು ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ.

Pic credit: Google

ಕರುಣ್ ನಾಯರ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಇದುವರೆಗೆ ಆಡಿರುವ 5 ಇನ್ನಿಂಗ್ಸ್‌ಗಳಲ್ಲಿ ವಿದರ್ಭ ಪರ 542 ಸರಾಸರಿಯಲ್ಲಿ 542 ರನ್ ಗಳಿಸಿದ್ದಾರೆ.

Pic credit: Google

ಇದರಲ್ಲಿ 4 ಶತಕಗಳನ್ನು ಬಾರಿಸಿರುವ ಕರುಣ್ ನಾಯರ್, ಇಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾಗಿದ್ದಾರೆ.

Pic credit: Google

ಆದರೆ, ಈ ಅಪ್ರತಿಮ ಪ್ರದರ್ಶನದ ನಂತರವೂ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾದಲ್ಲಿ ಆಯ್ಕೆಯಾಗುವುದು ಕಷ್ಟ.

Pic credit: Google

ಕರುಣ್ ನಾಯರ್ 2016 ರಲ್ಲಿ ಭಾರತದ ಪರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ಗೆ ಚೊಚ್ಚಲ ಪ್ರವೇಶ ಮಾಡಿದರು. ಆದರೂ ಅವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ.

Pic credit: Google

ಇದುವರೆಗೆ ಕರುಣ್ ಈ ಎರಡು ಮಾದರಿಗಳ ಭಾರತದ ಪರ 1 ಶತಕದೊಂದಿಗೆ 420 ರನ್ ಗಳಿಸಿದ್ದಾರೆ. ಇದೀಗ ದೇಶೀ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಲಿ ಎಂಬುದು ಎಲ್ಲರ ಆಶಯವಾಗಿದೆ.

Pic credit: Google