ಸತತ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್

05 January 2025

Pic credit: Google

ಪೃಥ್ವಿ ಶಂಕರ

ಒಂದೆಡೆ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಕಲೆಹಾಕಲು ಪರದಾಡುತ್ತಿದ್ದು, ಇದರ ಫಲವಾಗಿ ಸರಣಿಯನ್ನು ಕಳೆದುಕೊಂಡಿದ್ದಾರೆ.

Pic credit: Google

ಇನ್ನೊಂದೆಡೆ 3 ವರ್ಷಗಳಿಂದ ತಂಡದಿಂದ ಹೊರಗುಳಿದಿರುವ ಆಟಗಾರನೊಬ್ಬ ದೇಶೀ ಕ್ರಿಕೆಟ್​ನಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಿದ್ದಾನೆ.

Pic credit: Google

ಆತ ಬೇರ್ಯಾರು ಅಲ್ಲ. ಕರ್ನಾಟಕ ತಂಡದ ನಾಯಕತ್ವ ವಹಿಸುತ್ತಿರುವ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್‌ಗಳ ಶಿಖರ ಕಟ್ಟಿರುವ ಮಯಾಂಕ್ ಅಗರ್ವಾಲ್.

Pic credit: Google

ಈ ಟೂರ್ನಿಯಲ್ಲಿ ಈಗಾಗಲೇ ಹ್ಯಾಟ್ರಿಕ್ ಶತಕ ಸಿಡಿಸಿರುವ ಮಯಾಂಕ್ ಇದೀಗ ಸತತ 5 ಪಂದ್ಯಗಳಲ್ಲಿ ನಾಲ್ಕನೇ ಶತಕ ಬಾರಿಸಿ ಸಂಚಲನ ಮೂಡಿಸಿದ್ದಾರೆ.

Pic credit: Google

ನಾಗಾಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮಯಾಂಕ್ 119 ಎಸೆತಗಳಲ್ಲಿ 116 ರನ್ ಗಳಿಸಿ ತಂಡಕ್ಕೆ 9 ವಿಕೆಟ್ ಗಳ ಭರ್ಜರಿ ಜಯ ತಂದುಕೊಟ್ಟರು.

Pic credit: Google

ಮಯಾಂಕ್ ಈ ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 4 ಶತಕ ಮತ್ತು 1 ಅರ್ಧ ಶತಕ ಸೇರಿದಂತೆ 153 ಸರಾಸರಿಯೊಂದಿಗೆ ಗರಿಷ್ಠ 613 ರನ್ ಗಳಿಸಿದ್ದಾರೆ.

Pic credit: Google

ಈ 33 ವರ್ಷದ ಬ್ಯಾಟ್ಸ್‌ಮನ್ ಭಾರತಕ್ಕಾಗಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಮಾರ್ಚ್ 2022 ರಲ್ಲಿ ಮತ್ತು ಕೊನೆಯ ಏಕದಿನ ಪಂದ್ಯವನ್ನು ನವೆಂಬರ್ 2020 ರಲ್ಲಿ ಆಡಿದ್ದರು.

Pic credit: Google

ಇದೀಗ ದೇಶೀ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಮಯಾಂಕ್ ಅಗರ್ವಾಲ್​ಗೆ ಮತ್ತೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

Pic credit: Google