ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿದ 9 ಬ್ಯಾಟ್ಸ್ಮನ್ಗಳಿವರು
16 october 2024
Pic credit: Google
ಪೃಥ್ವಿ ಶಂಕರ
Pic credit: Google
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾದ ಪಾತುಮ್ ನಿಸ್ಸಾಂಕ ವಿಶಿಷ್ಟ ದಾಖಲೆ ಬರೆದಿದ್ದು, ಶಮರ್ ಜೋಸೆಫ್ ಎಸೆದ ಒಂದೇ ಓವರ್‌ನಲ್ಲಿ ಸತತ 6 ಬೌಂಡರಿಗಳನ್ನು ಬಾರಿಸಿದ್ದಾರೆ.
Pic credit: Google
ಭಾರತದ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ 1982 ರಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಬಾಬ್ ವಿಲ್ಲಿಸ್ ಅವರ ಒಂದೇ ಓವರ್‌ನಲ್ಲಿ ಸತತ 6 ಬೌಂಡರಿಗಳನ್ನು ಬಾರಿಸಿದ್ದರು.
Pic credit: Google
ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ 2004ರಲ್ಲಿ ಇಂಗ್ಲೆಂಡ್ ಬೌಲರ್ ಮ್ಯಾಥ್ಯೂ ಹೊಗಾರ್ಡ್ ಅವರ ಒಂದು ಓವರ್‌ನಲ್ಲಿ ಸತತ 6 ಬೌಂಡರಿಗಳನ್ನು ಹೊಡೆದಿದ್ದರು.
Pic credit: Google
ವೆಸ್ಟ್ ಇಂಡೀಸ್ನ ಮತ್ತೊಬ್ಬ ಕ್ರಿಕೆಟಿಗ ರಾಮನರೇಶ್ ಸರವಣ್ 2006ರಲ್ಲಿ ಭಾರತದ ಬೌಲರ್ ಮುನಾಫ್ ಪಟೇಲ್ ಅವರ ಓವರ್‌ನ ಎಲ್ಲಾ ಎಸೆತಗಳಲ್ಲಿ ಬೌಂಡರಿ ಬಾರಿಸಿದ್ದರು.
Pic credit: Google
ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ 2007ರಲ್ಲಿ ಇಂಗ್ಲೆಂಡ್ ಬೌಲರ್ ಜೇಮ್ಸ್ ಆಂಡರ್ಸನ್ ಅವರ ಒಂದು ಓವರ್‌ನಲ್ಲಿ ಸತತ 6 ಬೌಂಡರಿಗಳನ್ನು ಬಾರಿಸಿದ್ದರು.
Pic credit: Google
2012 ರ ಐಪಿಎಲ್ನಲ್ಲಿ ಭಾರತದ ಅಜಿಂಕ್ಯ ರಹಾನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದಲ್ಲಿ 6 ಬೌಂಡರಿಗಳನ್ನು ಸಿಡಿಸಿದ್ದರು.
Pic credit: Google
ಶ್ರೀಲಂಕಾದ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಶಾನ್ 2015ರಲ್ಲಿ ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಜಾನ್ಸನ್ ಅವರ ಓವರ್‌ನಲ್ಲಿ ಸತತ 6 ಬೌಂಡರಿಗಳನ್ನು ಬಾರಿಸಿದ್ದರು.
Pic credit: Google
2021 ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪೃಥ್ವಿ ಶಾ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸತತ 6 ಬೌಂಡರಿ ಬಾರಿಸಿದ್ದರು.
Pic credit: Google
ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ 2022 ರಲ್ಲಿ ಪಾಕಿಸ್ತಾನದ ಬೌಲರ್ ಸೌದ್ ಶಕೀಲ್ ಅವರ ಓವರ್‌ನಲ್ಲಿ ಸತತ 6 ಬೌಂಡರಿ ಹೊಡೆದಿದ್ದರು.