ಯುವರಾಜ್ ಸಿಂಗ್ ಗೆಲ್ಲದ ಯಾವುದಾದರೂ ಟ್ರೋಫಿ ಉಂಟೇ..?

14 July 2024

Pic credit - Google

ಪೃಥ್ವಿಶಂಕರ

Pic credit -  Google

ಯುವರಾಜ್ ಸಿಂಗ್ ಎಂತಹ ಚಾಂಪಿಯನ್ ಆಟಗಾರ ಎಂಬುದನ್ನು ನಮಗೆಲ್ಲ ಗೊತ್ತೇ ಇದೆ. ಟೀಂ ಇಂಡಿಯಾ ಗೆದ್ದ 2 ವಿಶ್ವಕಪ್​​ಗಳಲ್ಲಿ ಯುವಿ ಪಾತ್ರ ಅಪಾರವಾಗಿತ್ತು.

ಯುವರಾಜ್ ಸಿಂಗ್

Pic credit -  Google

ಇದೀಗ ಲಂಡನ್‌ನಲ್ಲಿ ನಡೆದ ಚೊಚ್ಚಲ ಆವೃತ್ತಿಯ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್​ನಲ್ಲೂ ಇಂಡಿಯಾ ಚಾಂಪಿಯನ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯುವಿ ಯಶಸ್ವಿಯಾಗಿದ್ದಾರೆ.

ಡಬ್ಲ್ಯುಸಿಎಲ್ 2024

Pic credit -  Google

ಯುವಿ ನಾಯಕತ್ವದಲ್ಲಿ ಟೂರ್ನಿ ಆಡಿದ್ದ ಇಂಡಿಯಾ ಚಾಂಪಿಯನ್ಸ್ ತಂಡ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಡಬ್ಲ್ಯುಸಿಎಲ್ ಚಾಂಪಿಯನ್

Pic credit -  Google

ಇದರೊಂದಿಗೆ ಯುವರಾಜ್ ಸಿಂಗ್ ಗೆದ್ದ ಪ್ರಮುಖ ಟ್ರೋಫಿಗಳ ಸಂಖ್ಯೆ 13ಕ್ಕೇರಿದೆ. ಇದಕ್ಕೂ ಮೊದಲು ಯುವಿ ಕ್ರಿಕೆಟ್ ಲೋಕದಲ್ಲಿ ಪ್ರಮುಖವಾಗಿ 12 ಟ್ರೋಫಿಗಳನ್ನು ಗೆದ್ದಿದ್ದಾರೆ.

ಪ್ರಶಸ್ತಿಗಳ ಪಟ್ಟಿ

Pic credit -  Google

ಕ್ರಿಕೆಟ್ ಲೋಕದಲ್ಲಿ ಯುವರಾಜ್ ಗೆದ್ದ ಮೊದಲ ಟ್ರೋಫಿ ಅಂಡರ್-15 ವಿಶ್ವಕಪ್. ಇದಾದ ಬಳಿಕ ಯುವಿ 19 ವರ್ಷದೊಳಗಿನವರ ವಿಶ್ವಕಪ್ ಕೂಡ ಗೆದ್ದಿದ್ದರು.

ಅ- 19  ವಿಶ್ವಕಪ್

Pic credit -  Google

ಆ ನಂತರ ಯುವರಾಜ್ 2007 ರ ಟಿ20 ವಿಶ್ವಕಪ್, 2011 ರ ಏಕದಿನ ವಿಶ್ವಕಪ್  ಮತ್ತು 2002 ರ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದರು.

ಟಿ20 ವಿಶ್ವಕಪ್

Pic credit -  Google

ಇದಲ್ಲದೆ ಯುವರಾಜ್ ಸಿಂಗ್ ಐಪಿಎಲ್​ನಲ್ಲೂ ಚಾಂಪಿಯನ್ ತಂಡದ ಭಾಗವಾಗಿದ್ದರು. ಇದರ ಜೊತೆಗೆ ದೇಶೀಯ ಕ್ರಿಕೆಟ್‌ನಲ್ಲಿ, ಅವರು ದುಲೀಪ್ ಟ್ರೋಫಿ ಮತ್ತು ಸಾಲ್ವೆ ಚಾಲೆಂಜರ್ಸ್ ಟ್ರೋಫಿಯಂತಹ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಐಪಿಎಲ್ ಟ್ರೋಫಿ

Pic credit -  Google

ಯುವರಾಜ್ ಸಿಂಗ್ ಟಿ10 ಲೀಗ್ ಮತ್ತು ರಸ್ತೆ ಸುರಕ್ಷತಾ ಸರಣಿಗಳಲ್ಲಿ ಆಡಿದ್ದು, ಅಲ್ಲಿಯೂ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಟಿ10 ಚಾಂಪಿಯನ್