ಈ ಬೌಲರ್​ಗಳ ವಿರುದ್ಧ ರೋಹಿತ್ ಶರ್ಮಾ ಆಟ ನಡೆಯಲ್ಲ..!

24 october 2024

Pic credit: Google

ಪೃಥ್ವಿ ಶಂಕರ

ಪುಣೆ ಟೆಸ್ಟ್​ನಲ್ಲಿ ಕಿವೀಸ್ ತಂಡವನ್ನು 259 ರನ್​ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 16 ರನ್ ಕಲೆಹಾಕಿದೆ. ನಾಯಕ ರೋಹಿತ್ ಶರ್ಮಾ, ಸೌಥಿ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

Pic credit: Google

ಇದರೊಂದಿಗೆ ಟಿಮ್ ಸೌಥಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ. ಈ ನ್ಯೂಜಿಲೆಂಡ್ ವೇಗಿ ರೋಹಿತ್​ರನ್ನು ಇದುವರೆಗೆ 14 ಬಾರಿ ಪೆವಿಲಿಯನ್​ಗೆ ಕಳುಹಿಸಿದ್ದಾರೆ.

Pic credit: Google

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾರನ್ನು 14 ಬಾರಿ ಔಟ್ ಮಾಡಿದ್ದಾರೆ.

Pic credit: Google

ಶ್ರೀಲಂಕಾದ ಆ್ಯಂಜೆಲೋ ಮ್ಯಾಥ್ಯೂಸ್ ಇದುವರೆಗೆ ರೋಹಿತ್ ಶರ್ಮಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಬಾರಿ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Pic credit: Google

ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ರೋಹಿತ್ ಶರ್ಮಾ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 9 ಬಾರಿ ಔಟ್ ಮಾಡಿದ್ದಾರೆ.

Pic credit: Google

ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಇದುವರೆಗೆ ರೋಹಿತ್ ಶರ್ಮಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 9 ಬಾರಿ ಔಟ್ ಮಾಡಿದ್ದಾರೆ.

Pic credit: Google

ಪ್ಯಾಟ್ ಕಮಿನ್ಸ್ ಇದುವರೆಗೆ ರೋಹಿತ್ ಶರ್ಮಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ಬಾರಿ ಔಟ್ ಮಾಡಿದ್ದಾರೆ.

Pic credit: Google

ದಕ್ಷಿಣ ಆಫ್ರಿಕಾದ ಮೋರ್ನೆ ಮೊರ್ಕೆಲ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾಗೆ 7 ಬಾರಿ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

Pic credit: Google