ನಿಯಮ ಉಲ್ಲಂಘಿಸಿದ್ದಕ್ಕಾಗಿ ಐಸಿಸಿಯಿಂದ ಅಮಾನತ್ತಿಗೊಳಗಾದ 9 ದೇಶಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

11 November 2023

ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಶ್ರೀಲಂಕಾ ಕ್ರಿಕೆಟ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಐಸಿಸಿ ಅಮಾನತುಗೊಳಿಸಿದೆ.

ಶ್ರೀಲಂಕಾಗೂ ಮೊದಲು ಸರ್ಕಾರದ ಹಸ್ತಕ್ಷೇಪದಿಂದಾಗಿ 2019 ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಅನ್ನು ಸಹ ಐಸಿಸಿ ಅಮಾನತುಗೊಳಿಸಿತ್ತು.

1970 ರಲ್ಲಿ, ವರ್ಣಭೇದ ನೀತಿಯಿಂದಾಗಿ ದಕ್ಷಿಣ ಆಫ್ರಿಕಾವನ್ನು ಐಸಿಸಿ ಅಮಾನತುಗೊಳಿಸಿತ್ತು. ಆ ಬಳಿಕ 21 ವರ್ಷಗಳ ನಂತರ ಅಂದರೆ  1991 ರಲ್ಲಿ ಆಫ್ರಿಕಾ ತಂಡ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿತು.

1992 ರಲ್ಲಿ ಐಸಿಸಿ ಸದಸ್ಯತ್ವ ಪಡೆದಿದ್ದ ಬ್ರೂನಿ ದಾರುಸ್ಸಲಾಮ್ ರಾಷ್ಟ್ರೀಯ ಕ್ರಿಕೆಟ್ ಅಸೋಸಿಯೇಷನ್ ಅನ್ನು 2014ರಲ್ಲಿ ಐಸಿಸಿ ಅಮಾನತು ಮಾಡಿತ್ತು.

ಕಿಂಗ್ಡಮ್ ಆಫ್ ಟೊಂಗಾದ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ನಿಯಮಗಳನ್ನು ಪಾಲಿಸದ ಕಾರಣ ಐಸಿಸಿ 2014ರಲ್ಲಿ ಅಮಾನತುಗೊಳಿಸಿತ್ತು.

ಸ್ವಿಟ್ಜರ್ಲೆಂಡ್ ಕ್ರಿಕೆಟ್ ತಂಡವನ್ನು 2012 ರಲ್ಲಿ ಸದಸ್ಯತ್ವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಅಮಾನತುಗೊಳಿಸಿತು.

ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜಾಂಬಿಯಾ ತಂಡವನ್ನು 2021 ರಲ್ಲಿ ಅಮಾನತುಗೊಳಿಸಲಾಗಿತ್ತು.

ಐಸಿಸಿ ನಿಯಮಗಳನ್ನು ಅನುಸರಿಸದ ಕಾರಣ ರಷ್ಯಾವನ್ನು 2021 ರಲ್ಲಿ ಅಮಾನತುಗೊಳಿಸಲಾಯಿತು.

ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಕಾರಣ ನೀಡಿ ಕ್ಯೂಬನ್ ಕ್ರಿಕೆಟ್ ಆಯೋಗದ ಸದಸ್ಯತ್ವವನ್ನು ಐಸಿಸಿ 2013 ರಲ್ಲಿ ರದ್ದುಗೊಳಿಸಿತು.