ಟೆಸ್ಟ್​ನಲ್ಲಿ ಅತಿ ವೇಗದ ತ್ರಿಶತಕ ಸಿಡಿಸಿದ್ಯಾರು ಗೊತ್ತಾ?

10 october 2024

Pic credit: Google

ಪೃಥ್ವಿ ಶಂಕರ

Pic credit: Google

ಪಾಕಿಸ್ತಾನ ವಿರುದ್ಧದ ಮುಲ್ತಾನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ತ್ರಿಶತಕದ ಇನ್ನಿಂಗ್ಸ್ ಆಡಿದ್ದಾರೆ.

Pic credit: Google

ಮುಲ್ತಾನ್‌ನಲ್ಲಿ 322 ಎಸೆತಗಳನ್ನು ಎದುರಿಸಿದ ಬ್ರೂಕ್ 317 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 29 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು.

Pic credit: Google

ಕೇವಲ 310 ಎಸೆತಗಳಲ್ಲಿ ತ್ರಿಶತಕ ಗಳಿಸಿದ  ಹ್ಯಾರಿ ಬ್ರೂಕ್ ಅತಿವೇಗದ ತ್ರಿಶತಕ ಬಾರಿಸಿದ ಆಂಗ್ಲ ಆಟಗಾರ ಎನಿಸಿಕೊಂಡಿದ್ದಾರೆ.

Pic credit: Google

ಇನ್ನು ಟೆಸ್ಟ್​ನಲ್ಲಿ ವೇಗದ ತ್ರಿಶತಕ ಸಿಡಿಸಿದ ವಿಶ್ವದಾಖಲೆ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ. 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ 278 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದರು.

Pic credit: Google

ಇದರೊಂದಿಗೆ 2003ರಲ್ಲಿ ಜಿಂಬಾಬ್ವೆ ವಿರುದ್ಧ 362 ಎಸೆತಗಳಲ್ಲಿ ತ್ರಿಶತಕ ಸಿಡಿಸಿದ್ದ ಮ್ಯಾಥ್ಯೂ ಹೇಡನ್ ದಾಖಲೆಯನ್ನು ಸೆಹ್ವಾಗ್ ಮುರಿದಿದ್ದರು.

Pic credit: Google

ಇದಲ್ಲದೆ ನಾಲ್ಕನೇ ಅತಿ ವೇಗದ ಟ್ರಿಪಲ್ ಸೆಂಚುರಿ ಕೂಡ ಸೆಹ್ವಾಗ್ ಹೆಸರಿನಲ್ಲಿದೆ. ಅವರು ಮುಲ್ತಾನ್‌ನಲ್ಲಿ 364 ಎಸೆತಗಳಲ್ಲಿ ಈ ಸಾಧನೆ ಮಾಡಿದರು.

Pic credit: Google

ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ 381 ಎಸೆತಗಳಲ್ಲಿ ತ್ರಿಶತಕ ಸಿಡಿಸಿದ್ದ ಕನ್ನಡಿಗ ಕರುಣ್ ನಾಯರ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.