ಟೆಸ್ಟ್​ನಲ್ಲಿ ಅಧಿಕ ಬಾರಿ ಸೊನ್ನೆ ಸುತ್ತಿದ ಟೀಂ ಇಂಡಿಯಾ ನಾಯಕ ಯಾರು ಗೊತ್ತಾ?

25  october 2024

Pic credit: Google

ಪೃಥ್ವಿ ಶಂಕರ

ನ್ಯೂಜಿಲೆಂಡ್ ವಿರುದ್ಧದ ಪುಣೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ನಾಯಕ ರೋಹಿತ್ ಶರ್ಮಾ 9 ಎಸೆತಗಳನ್ನು ಆಡಿದರೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

Pic credit: Google

ವಾಸ್ತವವಾಗಿ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪ್ರದರ್ಶನ ಅಷ್ಟು ಗಮನಾರ್ಹವಾಗಿಲ್ಲ. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಸ್ಥಿರ ಪ್ರದರ್ಶನ ನೀಡುವ ರೋಹಿತ್​ಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಇದು ಸಾಧ್ಯವಾಗುತ್ತಿಲ್ಲ.

Pic credit: Google

ಇದೀಗ ನ್ಯೂಜಿಲೆಂಡ್ ವಿರುದ್ಧ ಶೂನ್ಯಕ್ಕೆ ಔಟಾಗುವುದರೊಂದಿಗೆ, ರೋಹಿತ್ ಶರ್ಮಾ ಟೆಸ್ಟ್​ನಲ್ಲಿ 11 ನೇ ಬಾರಿಗೆ ಶೂನ್ಯಕ್ಕೆ ಔಟಾದ ಬೇಡದ ದಾಖಲೆ ಬರೆದರು. ಇದರೊಂದಿಗೆ ಈ ವಿಚಾರದಲ್ಲಿ ಧೋನಿಯನ್ನು ಸರಿಗಟ್ಟಿದರು.

Pic credit: Google

ವಾಸ್ತವವಾಗಿ ಭಾರತದ ನಾಯಕನಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ದಾಖಲೆಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ವಿರಾಟ್ ಕೊಹ್ಲಿ 16 ಬಾರಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

Pic credit: Google

ವಿರಾಟ್ ಕೊಹ್ಲಿ ನಂತರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಎರಡನೇ ಸ್ಥಾನದಲ್ಲಿದ್ದು, ಗಂಗೂಲಿ ಒಟ್ಟು 13 ಬಾರಿ ಶೂನ್ಯಕ್ಕೆ ಔಟಾಗಿದ್ದರು.

Pic credit: Google

ಈ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ ಸೇರಿದ್ದು, ಭಾರತದ ನಾಯಕನಾಗಿ ಧೋನಿ ಒಟ್ಟು 11 ಬಾರಿ ಶೂನ್ಯಕ್ಕೆ ಔಟಾಗಿದ್ದರು.

Pic credit: Google

ಇದೀಗ ಕಿವೀಸ್ ವಿರುದ್ಧ ಶೂನ್ಯಕ್ಕೆ ಔಟಾಗಿರುವ ರೋಹಿತ್ ಶರ್ಮಾ, ಈ ಪಟ್ಟಿಯಲ್ಲಿ ಧೋನಿಯೊಂದಿಗೆ ಜಂಟಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

Pic credit: Google

ಮಾಜಿ ಅನುಭವಿ ಆಟಗಾರ ಕಪಿಲ್ ದೇವ್ ಕೂಡ ಭಾರತ ತಂಡದ ನಾಯಕರಾಗಿದ್ದಾಗ 10 ಬಾರಿ ಖಾತೆ ತೆರೆಯದೆ ಔಟಾದ ದಾಖಲೆ ಮಾಡಿದ್ದಾರೆ.

Pic credit: Google