ಭಾರತ- ಪಾಕಿಸ್ತಾನ ಏಕದಿನ ವಿಶ್ವಕಪ್ ಮುಖಾಮುಖಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯರಿವರು
13 October 2023
1992 ವಿಶ್ವಕಪ್: ಬ್ಯಾಟಿಂಗ್ನಲ್ಲಿ ಅಜೇಯ 54 ರನ್ ಸಿಡಿಸಿದ್ದ ಸಚಿನ್ ತೆಂಡೂಲ್ಕರ್, ಬೌಲಿಂಗ್ನಲ್ಲು 37 ರನ್ ನೀಡಿ 1 ವಿಕೆಟ್ ಉರುಳಿಸಿದ್ದರು.
1996 ವಿಶ್ವಕಪ್: ನವಜೋತ್ ಸಿಧು ಪಾಕ್ ವಿರುದ್ಧ ಸ್ಮರಣೀಯ 93 ರನ್ಗಳ ಇನ್ನಿಂಗ್ಸ್ ಆಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.
1999 ವಿಶ್ವಕಪ್: ವೇಗಿ ವೆಂಕಟೇಶ್ ಪ್ರಸಾದ್ ಕೇವಲ 27 ರನ್ ನೀಡಿ 5 ವಿಕೆಟ್ ಪಡೆದು ಈ ಪ್ರಶಸ್ತಿ ಗೆದ್ದಿದ್ದರು.
2003 ವಿಶ್ವಕಪ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 98 ರನ್ಗಳ ಇನ್ನಿಂಗ್ಸ್ ಆಡಿ ಈ ಪ್ರಶಸ್ತಿ ಗೆದ್ದಿದ್ದರು.
2011 ವಿಶ್ವಕಪ್: ಮತ್ತೊಮ್ಮೆ ಸಚಿನ್ ತೆಂಡೂಲ್ಕರ್ 85 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿ ಈ ಪ್ರಶಸ್ತಿ ಗೆದ್ದಿದ್ದರು.
2015 ವಿಶ್ವಕಪ್: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 107 ರನ್ಗಳ ಇನ್ನಿಂಗ್ಸ್ ಆಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.
2019 ವಿಶ್ವಕಪ್: ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ 140 ರನ್ಗಳ ಸ್ಫೋಟಕ ಬ್ಯಾಟಿಂಗ್ ಮಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.
ಇದನ್ನೂ ಓದಿ