ಟೀಂ ಇಂಡಿಯಾದ ಅತ್ಯಂತ ಕಳಪೆ ಫೀಲ್ಡರ್ ಯಾರು? ಪಟ್ಟಿಯಲ್ಲಿ ದಿಗ್ಗಜರ ಹೆಸರು

23 october 2024

Pic credit: Google

ಪೃಥ್ವಿ ಶಂಕರ

Pic credit: Google

ಟೀಂ ಇಂಡಿಯಾದ ಅತ್ಯಂತ ಕಳಪೆ ಫೀಲ್ಡರ್ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ತುಂಬಾ ಕಷ್ಟ. ಆದರೆ 2019 ರಿಂದ ಇಲ್ಲಿಯವರೆಗೆ ಅಧಿಕ ಕ್ಯಾಚ್‌ಗಳನ್ನು ಕೈಚೆಲ್ಲಿದ ಆಟಗಾರರ ಅಂಕಿ- ಅಂಶಗಳನ್ನು ನೋಡಿದಾಗ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.

Pic credit: Google

ವಾಸ್ತವವಾಗಿ 2019 ರಿಂದ ಇಲ್ಲಿಯವರೆಗೆ ಅಧಿಕ ಕ್ಯಾಚ್‌ಗಳನ್ನು ಕೈಚೆಲ್ಲಿದ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ದಿಗ್ಗಜರ ಹೆಸರುಗಳೇ ಅಗ್ರಸ್ಥಾನದಲ್ಲಿವೆ. ಅವುರಗಳ ವಿವರ ಇಲ್ಲಿದೆ.

Pic credit: Google

ವಿರಾಟ್ ಕೊಹ್ಲಿ 2019 ರಿಂದ ಟೆಸ್ಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ಭಾರತದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಕಳೆದ 5 ವರ್ಷಗಳಲ್ಲಿ 17 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.

Pic credit: Google

ಈ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದು, ಅವರು 2019 ರಿಂದ ಟೆಸ್ಟ್‌ನಲ್ಲಿ 12 ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ.

Pic credit: Google

ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅಜಿಂಕ್ಯ ರಹಾನೆ ಇದುವರೆಗೆ 9 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.

Pic credit: Google

ಈ ಪಟ್ಟಿಯಲ್ಲಿ ಹನುಮ ವಿಹಾರಿ ನಾಲ್ಕನೇ ಸ್ಥಾನದಲ್ಲಿದ್ದು, ಅವರು 2019 ರಿಂದ ಇಲ್ಲಿಯವರೆಗೆ ಟೆಸ್ಟ್‌ನಲ್ಲಿ 8 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.

Pic credit: Google

ಚೇತೇಶ್ವರ ಪೂಜಾರ ಅವರ ದಾಖಲೆಯೂ ತೀರಾ ಕಳಪೆಯಾಗಿದ್ದು, ಕಳೆದ 5 ವರ್ಷಗಳಲ್ಲಿ ಟೆಸ್ಟ್‌ನಲ್ಲಿ 7 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.

Pic credit: Google

ಕೆಎಲ್ ರಾಹುಲ್ ಕೂಡ ಈ ಪಟ್ಟಿಯಲ್ಲಿದ್ದು, ಅವರು 2019 ರಿಂದ ಇಲ್ಲಿಯವರೆಗೆ ಟೆಸ್ಟ್‌ನಲ್ಲಿ 7 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.