ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ 11ನೇ ದ್ವಿಶತಕಗಳ ಪಟ್ಟಿ ಇಲ್ಲಿದೆ.
08 November 2023
ಸಚಿನ್ ತೆಂಡೂಲ್ಕರ್ 2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಇತಿಹಾಸದಲ್ಲಿ ಮೊದಲ ಶತಕ ದಾಖಲಿಸಿದರು. ಸಚಿನ್ 147 ಎಸೆತಗಳನ್ನು ಎದುರಿಸಿ 25 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 200 ರನ್ ಸಿಡಿಸಿದ್ದರು.
ರೋಹಿತ್ ಶರ್ಮಾ ಏಕದಿನದಲ್ಲಿ 3 ದ್ವಿಶತಕ ಬಾರಿಸಿದ್ದಾರೆ. 2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್, 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ ಹಾಗೂ 2017ರಲ್ಲಿ ಶ್ರೀಲಂಕಾ ವಿರುದ್ಧ 208 ರನ್ ಬಾರಿಸಿದ್ದಾರೆ.
2011ರಲ್ಲಿ ಸೆಹ್ವಾಗ್ 149 ಎಸೆತಗಳಲ್ಲಿ 25 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 219 ರನ್ ಗಳಿಸಿದ್ದರು.
2015ರಲ್ಲಿ ಜಿಂಬಾಬ್ವೆ ವಿರುದ್ಧ ಗೇಲ್ 10 ಬೌಂಡರಿ ಹಾಗೂ 16 ಸಿಕ್ಸರ್‌ಗಳ ನೆರವಿನಿಂದ 215 ರನ್ ಗಳಿಸಿದ್ದರು.
2015 ರಲ್ಲಿ, ನ್ಯೂಜಿಲೆಂಡ್‌ನ ಗಪ್ಟಿಲ್ ವೆಸ್ಟ್ ಇಂಡೀಸ್ ವಿರುದ್ಧ 24 ಬೌಂಡರಿ ಮತ್ತು 11 ಸಿಕ್ಸರ್‌ಗಳ ಸಹಾಯದಿಂದ 237* ರನ್ ಗಳಿಸಿದ್ದರು.
2018ರಲ್ಲಿ ಜಿಂಬಾಬ್ವೆ ವಿರುದ್ಧ ಫಖರ್ ಜಮಾನ್ 24 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಾಯದಿಂದ 210 ರನ್ ಗಳಿಸಿದ್ದರು.
2022ರಲ್ಲಿ ಇಶಾನ್ ಕಿಶನ್ ಬಾಂಗ್ಲಾದೇಶ ವಿರುದ್ಧ 24 ಬೌಂಡರಿಗಳ ನೆರವಿನಿಂದ 210 ರನ್ ಬಾರಿಸಿದ್ದರು.
2023ರಲ್ಲಿ ಶುಭ್ಮನ್ ಗಿಲ್ 19 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ 208 ರನ್ ಗಳಿಸಿದ್ದರು.
ಈಗ ಅಫ್ಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ 201 ರನ್ ಬಾರಿಸಿದ್ದಾರೆ.