ಭಾರತ- ಅಫ್ಘಾನಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳ ಪಟ್ಟಿ ಇಲ್ಲಿದೆ.

12 October 2023

19 ಇನ್ನಿಂಗ್ಸ್​ಗಳಲ್ಲಿ 1000 ರನ್ ಪೂರೈಸಿದ ರೋಹಿತ್ ಶರ್ಮಾ, ಏಕದಿನ ವಿಶ್ವಕಪ್​ನಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಅಫ್ಘಾನ್ ವಿರುದ್ಧ ಜಸ್ಪ್ರೀತ್ ಬುಮ್ರಾ 39 ರನ್ ನೀಡಿದ 4 ವಿಕೆಟ್ ಉರುಳಿಸಿದ್ದು, ಏಕದಿನ ವಿಶ್ವಕಪ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

53 ಇನ್ನಿಂಗ್ಸ್‌ಗಳಲ್ಲಿ 2311 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ, ವಿಶ್ವಕಪ್(ಏಕದಿನ ಮತ್ತು ಟಿ20)  ಪಂದ್ಯಾವಳಿಗಳಲ್ಲಿ ಅಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡರು.

ಏಕದಿನದಲ್ಲಿ 31ನೇ ಶತಕ ಸಿಡಿಸಿದ ರೋಹಿತ್, 30ಏಕದಿನ ಶತಕಗಳನ್ನು ಸಿಡಿಸಿದ್ದ ರಿಕಿ ಪಾಂಟಿಂಗ್ ಅವರ  ದಾಖಲೆಯನ್ನು ಹಿಂದಿಕ್ಕಿದ್ದಾರೆ.

553 ಕ್ಕೂ ಅಧಿಕ ಸಿಕ್ಸರ್ ಸಿಡಿಸುವ ಮೂಲಕ ರೋಹಿತ್ ಶರ್ಮಾ ಕ್ರಿಸ್ ಗೇಲ್ ಅವರ (553) ಸಿಕ್ಸರ್‌ಗಳ ದಾಖಲೆಯನ್ನು ಮುರಿದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ನಿರ್ಮಿಸಿದರು.

ಕೇವಲ 63 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ, ಕಪಿಲ್ ದೇವ್ ಅವರ (72 ಎಸೆತ) ದಾಖಲೆಯನ್ನು ಮುರಿದರು.

7ನೇ ಶತಕವನ್ನು ಸಿಡಿಸುವ ಮೂಲಕ ರೋಹಿತ್ ಶರ್ಮಾ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ದಾಖಲೆ ನಿರ್ಮಿಸಿದರು.