ರಣಜಿ ಟ್ರೋಫಿಯಲ್ಲಿ ವೇಗದ ಶತಕ ಸಿಡಿಸಿದ 6 ಬ್ಯಾಟ್ಸ್‌ಮನ್‌ಗಳಿವರು

29 october 2024

Pic credit: Google

ಪೃಥ್ವಿ ಶಂಕರ

ಮಧ್ಯಪ್ರದೇಶ ಪರ ರಣಜಿ ಟ್ರೋಫಿ ಆಡುತ್ತಿರುವ ರಜತ್ ಪಾಟಿದಾರ್, ಹರಿಯಾಣ ವಿರುದ್ಧ ಬಿರುಸಿನ ಬ್ಯಾಟಿಂಗ್ ಮೂಲಕ ಅಮೋಘ ಶತಕ ಸಿಡಿಸಿದರು.

Pic credit: Google

ಹರಿಯಾಣ ಬೌಲರ್​ಗಳನ್ನು ಹೈರಾಣಾಗಿಸಿದ ರಜತ್ ಪಾಟಿದಾರ್ ಕೇವಲ 102 ಎಸೆತಗಳಲ್ಲಿ 159 ರನ್‌ಗಳ ಇನ್ನಿಂಗ್ಸ್‌ ಆಡಿದರು.

Pic credit: Google

ಈ ಇನ್ನಿಂಗ್ಸ್‌ನಲ್ಲಿ ರಜತ್ ಪಾಟಿದಾರ್ ಕೇವಲ 68 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ ರಣಜಿ ಟ್ರೋಫಿಯಲ್ಲಿ ಅತಿವೇಗದ ಶತಕ ಬಾರಿಸಿದ ಆರನೇ ಆಟಗಾರ ಎನಿಸಿಕೊಂಡಿದ್ದಾರೆ.

Pic credit: Google

ರಣಜಿ ಟ್ರೋಫಿಯಲ್ಲಿ ಅತಿ ವೇಗದ ಶತಕ ಬಾರಿಸಿದವರ ಪಟ್ಟಿಯಲ್ಲಿ ರಿಷಬ್ ಪಂತ್ ಮೊದಲ ಸ್ಥಾನದಲ್ಲಿದ್ದಾರೆ. ಪಂತ್ 2017ರಲ್ಲಿ ಜಾರ್ಖಂಡ್ ವಿರುದ್ಧ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿದ್ದರು.

Pic credit: Google

ಅಸ್ಸಾಂನ ಮಾಜಿ ಕ್ರಿಕೆಟಿಗ ರಾಜೇಶ್ ಬೋರಾ ರಣಜಿ ಟ್ರೋಫಿಯಲ್ಲಿ ಅತಿವೇಗದ ಶತಕ ಬಾರಿಸಿದ ಎರಡನೇ ಸ್ಥಾನದಲ್ಲಿದ್ದಾರೆ. ರಾಜೇಶ್ 1988ರಲ್ಲಿ ತ್ರಿಪುರಾ ವಿರುದ್ಧ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದ್ದರು.

Pic credit: Google

ರಣಜಿ ಟ್ರೋಫಿಯಲ್ಲಿ ಅತಿ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಕೂಡ ಸೇರಿದ್ದಾರೆ. ಛತ್ತೀಸ್‌ಗಢ ವಿರುದ್ಧ ಅಸ್ಸಾಂ ಪರ ರಿಯಾನ್ ಪರಾಗ್ ಕೇವಲ 56 ಎಸೆತಗಳಲ್ಲಿ ಶತಕ ದಾಖಲಿಸಿದರು.

Pic credit: Google

ತಮಿಳುನಾಡಿನ ಮಾಜಿ ಕ್ರಿಕೆಟಿಗ ರೂಬೆನ್ ಪೌಲ್ ರಣಜಿ ಟ್ರೋಫಿಯಲ್ಲಿ ಅತಿವೇಗದ ಶತಕ ಬಾರಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ರೂಬೆನ್ 1996ರಲ್ಲಿ ಗೋವಾ ವಿರುದ್ಧ ಕೇವಲ 60 ಎಸೆತಗಳಲ್ಲಿ ಶತಕ ಪೂರೈಸಿದ್ದರು.

Pic credit: Google