ಮಹಾರಾಜ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೈಸೂರು ತಂಡ, ಬೆಂಗಳೂರು ತಂಡವನ್ನು 45 ರನ್ಗಳಿಂದ ಮಣಿಸಿ ಮಹಾರಾಜ ಟ್ರೋಫಿಯನ್ನು ಎತ್ತಿಹಿಡಿಯಿತು.
Pic credit: Google
ಇದೇ ಮೊದಲ ಬಾರಿಗೆ ಮಹಾರಾಜ ಟ್ರೋಫಿಯ ಚಾಂಪಿಯನ್ ಆದ ಮೈಸೂರು ವಾರಿಯರ್ಸ್ ತಂಡಕ್ಕೆ 15 ಲಕ್ಷ ರೂ. ಬಹುಮಾನ ಲಭಿಸಿದೆ.
Pic credit: Google
ಇನ್ನು ಫೈನಲ್ ಪಂದ್ಯದಲ್ಲಿ ಸೋತ ಮಹಾರಾಜ ಟ್ರೋಫಿ ರನ್ನರ್ ಅಪ್ ತಂಡ ಬೆಂಗಳೂರು ಬ್ಲಾಸ್ಟರ್ಸ್ಗೆ 10 ಲಕ್ಷ ರೂ. ಬಹುಮಾನ ಸಿಕ್ಕಿದೆ.
Pic credit: Google
ಅತಿ ಹೆಚ್ಚು ರನ್ ಗಳಿಸಿದ್ದಲ್ಲದೆ, ಮೈಸೂರು ವಾರಿಯರ್ಸ್ ತಂಡವನ್ನು ಚಾಂಪಿಯನ್ ಮಾಡಿ, ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ಆಯ್ಕೆಯಾದ ಕರುಣ್ ನಾಯರ್ಗೆ 2 ಲಕ್ಷ ರೂ. ಬಹುಮಾನ ಸಿಕ್ಕಿದೆ.
Pic credit: Google
ಇದರ ಜೊತೆಗೆ ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಗೂ ಭಾಜನರಾದ ಕರುಣ್ ನಾಯರ್ಗೆ 1 ಲಕ್ಷ ರೂ. ಬಹುಮಾನ ನೀಡಲಾಗಿದೆ.
Pic credit: Google
ಹಾಗೆಯೇ ಇಡೀ ಪಂದ್ಯಾವಳಿಯಲ್ಲಿ 18 ವಿಕೆಟ್ ಕಬಳಿಸಿ ಉತ್ತಮ ಬೌಲರ್ ಎನಿಸಿಕೊಂಡ ಎಲ್.ಆರ್.ಕುಮಾರ್ 1 ಲಕ್ಷ ರೂಪಾಯಿ ಬಹುಮಾನ ಪಡೆದರು.
Pic credit: Google
ಪಂದ್ಯಾವಳಿಯಲ್ಲಿ ಬರೋಬ್ಬರಿ 52 ಸಿಕ್ಸರ್ ಬಾರಿಸಿದ ಅಭಿನವ್ ಮನೋಹರ್ ಕೂಡ 1 ಲಕ್ಷ ರೂಪಾಯಿ ಬಹುಮಾನ ಪಡೆದರು.