ಗಂಟೆಗೆ 150 ಕಿಮೀ ವೇಗ; ಶತಕ ಪೂರೈಸಿದ ಮಾರ್ಕ್ ವುಡ್

25 september 2024

Pic credit: Google

ಪೃಥ್ವಿ ಶಂಕರ

Pic credit: Google

ಗಂಟೆಗೆ 150 ಕಿಮೀ ವೇಗದಲ್ಲಿ 100 ಕ್ಕೂ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ ಬೌಲರ್​ಗಳ ಪಟ್ಟಿಯಲ್ಲಿ ಆಂಗ್ಲ ವೇಗಿ ಮಾರ್ಕ್​ ವುಡ್ ಶತಕದ ಸಾಧನೆ ಮಾಡಿದ್ದಾರೆ.

Pic credit: Google

ತನ್ನ ವೇಗದ ಬೌಲಿಂಗ್ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಸಾಕಷ್ಟು ಹೆಸರು ಮಾಡಿರುವ ಇಂಗ್ಲೆಂಡ್ ವೇಗಿ ಮಾರ್ಕ್​ವುಡ್ ಇದೀಗ ವಿನೂತನ ದಾಖಲೆಯೊಂದನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.

Pic credit: Google

2018 ವರ್ಷದಿಂದ ಇಲ್ಲಿಯವರೆಗೆ ಅಂದರೆ ಕಳೆದ 6 ವರ್ಷಗಳಲ್ಲಿ, ಮಾರ್ಕ್ ವುಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗಂಟೆಗೆ 150 ಕಿಮೀ ವೇಗದಲ್ಲಿ 100 ಕ್ಕೂ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ ಏಕೈಕ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.

Pic credit: Google

2018 ರಿಂದ, ಮಾರ್ಕ್ ವುಡ್ ಟೆಸ್ಟ್‌ ಪಂದ್ಯಗಳಲ್ಲಿ ಗಂಟೆಗೆ 150 ಕಿಮೀ ವೇಗದಲ್ಲಿ 109 ಎಸೆತಗಳನ್ನು ಬೌಲ್ ಮಾಡಿದ್ದು, ಅದರಲ್ಲಿ 3 ವಿಕೆಟ್‌ಗಳನ್ನು ಪಡೆದಿದ್ದಾರೆ.

Pic credit: Google

ಮಾರ್ಕ್ ವುಡ್ ಹೊರತುಪಡಿಸಿ, 150 ಕಿಮೀ ವೇಗದಲ್ಲಿ ಇನ್ನ್ಯಾವ ಬೌಲರ್​ ಕೂಡ 50 ಎಸೆತಗಳನ್ನು ಸಹ ಬೌಲ್ ಮಾಡಿಲ್ಲ.

Pic credit: Google

ದಕ್ಷಿಣ ಆಫ್ರಿಕಾದ ಎನ್ರಿಕ್ ನೋಕಿಯಾ 150 ಕಿಮೀಗೂ ಹೆಚ್ಚಿನ ವೇಗದಲ್ಲಿ 41 ಎಸೆತಗಳನ್ನು ಬೌಲ್ ಮಾಡಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Pic credit: Google

ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 40 ಎಸೆತಗಳನ್ನು ಎಸೆದಿದ್ದು, ಅದರಲ್ಲಿ 2 ವಿಕೆಟ್ ಪಡೆದಿದ್ದಾರೆ.