ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸೀಸ್ ಆರಂಭಿಕ ಮಿಚೆಲ್ ಮಾರ್ಷ್ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ.

21 October 2023

108 ಎಸೆತಗಳಲ್ಲಿ 121 ರನ್ ಸಿಡಿಸಿದ ಮಾರ್ಷ್ ಏಕದಿನ ಇತಿಹಾಸದಲ್ಲಿ ಜನ್ಮದಿನದಂದು ಶತಕ ಸಿಡಿಸಿದ 6ನೇ ಬ್ಯಾಟರ್ ಎನಿಸಿಕೊಂಡರು.

121 ರನ್‌ಗಳ ಈ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಮಾರ್ಷ್ 9 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಸಹ ಬಾರಿಸಿದರು.

ಮಿಚೆಲ್ ಮಾರ್ಷ್ ಅವರಿಗಿಂತ ಮೊದಲು ಜನ್ಮದಿನದಂದು ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ 6 ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವುರಗಳ ವಿವರ ಇಂತಿದೆ.

1993 ರಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಇಂಗ್ಲೆಂಡ್ ವಿರುದ್ಧ 100 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ಆ ಬಳಿಕ 1998ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ  134 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ರಾಸ್ ಟೇಲರ್  ಪಾಕಿಸ್ತಾನದ ವಿರುದ್ಧ 2011 ರಲ್ಲಿ 131 ರನ್​ಗಳ ಇನ್ನಿಂಗ್ಸ್ ಆಡಿದ್ದರು.

2022 ರಲ್ಲಿ ಟಾಮ್ ಲೇಥಮ್ ನೆದರ್ಲ್ಯಾಂಡ್ಸ್  ವಿರುದ್ಧ 140 ರನ್ ರನ್​ಗಳ ಇನ್ನಿಂಗ್ಸ್ ಆಡಿದ್ದರು.

ಇದೀಗ 2023 ರಲ್ಲಿ ಮಿಚೆಲ್ ಮಾರ್ಷ್ ಪಾಕಿಸ್ತಾನದ ವಿರುದ್ಧ 121 ರನ್ ಸಿಡಿಸಿದ್ದಾರೆ.

ವಾಸ್ತವವಾಗಿ ಮಾರ್ಷ್ ಅವರ ತಂದೆ ಜೆಫ್ ಮಾರ್ಷ್ ಕೂಡ ಕ್ರಿಕೆಟರ್ ಆಗಿದ್ದು, ಅವರು ಕೂಡ 1987 ರಲ್ಲಿ ಆಡಿದ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ್ದರು.

ಇದರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ತಂದೆ-ಮಗನ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.