ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಡೆನ್ಮಾರ್ಕ್ ಓಪನ್ ವರ್ಲ್ಡ್ ಟೂರ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

21 October 2023

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು 21-19, 21-12ರಲ್ಲಿ ಸುಪಾನಿದಾ ಕಟೆಥಾಂಗ್ (ಥಾಯ್ಲೆಂಡ್) ಅವರನ್ನು ಸೋಲಿಸಿದರು.

47 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಸಿಂಧು ಮೊದಲ ಗೇಮ್​ನಲ್ಲಿ ಕಠಿಣ ಪೈಪೋಟಿ ಎದುರಿಸಿದರು.

ಆದರೆ ಎರಡನೇ ಗೇಮ್​ನಲ್ಲಿ ಸಿಂಧು ಸಂಪೂರ್ಣ ಪ್ರಾಬಲ್ಯ ಮೆರೆದು ಗೆಲುವನ್ನು ಖಚಿತಪಡಿಸಿಕೊಂಡರು.

ಸಿಂಧು ಇಂದು ಸೆಮಿಫೈನಲ್‌ನಲ್ಲಿ ಕ್ಯಾರೊಲಿನಾ ಮರಿನ್ (ಸ್ಪೇನ್) ಅವರನ್ನು ಎದುರಿಸಲಿದ್ದಾರೆ.

ಕೆರೊಲಿನಾ ಮರಿನ್ ಕ್ವಾರ್ಟರ್ ಫೈನಲ್‌ನಲ್ಲಿ 19-21, 21-15, 21-18ರಲ್ಲಿ ತೈ ಜು ಯಿಂಗ್ (ಚೈನೀಸ್ ತೈಪೆ) ಅವರನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಈ ಇಬ್ಬರ ಮುಖಾಮುಖಿಯಲ್ಲಿ ಕೆರೊಲಿನಾ ಮರಿನ್ 10 ಪಂದ್ಯಗಳನ್ನು ಗೆದ್ದಿದ್ದರೆ, ಸಿಂಧು ಕೇವಲ ಐದು ಬಾರಿ ಗೆಲುವು ಸಾಧಿಸಿದ್ದಾರೆ.