ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಏಕದಿನ ವಿಶ್ವಕಪ್​ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.

21 October 2023

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ದಿಗ್ಗಜ ವೇಗಿ ವಾಸಿಂ ಅಕ್ರಂ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 8 ಓವರ್‌ ಬೌಲ್ ಮಾಡಿದ ಸ್ಟಾರ್ಕ್​ 65 ರನ್ ನೀಡಿ ಹಸನ್ ಅಲಿ(8) ವಿಕೆಟ್ ಪಡೆದರು. ಇದರೊಂದಿಗೆ ಅಪರೂಪದ ದಾಖಲೆ ಮಾಡಿದರು.

ಅಲಿ ವಿಕೆಟ್ ಜೊತೆಗೆ ಸ್ಟಾರ್ಕ್​ ಇದೀಗ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ವಾಸೀಮ್ ಅಕ್ರಮ್ ಅವರೊಂದಿಗೆ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ ಬೌಲರ್​ಗಳ ಪೈಕಿ 39 ಪಂದ್ಯಗಳಲ್ಲಿ 71 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಗ್ಲೆನ್ ಮೆಕ್ ಗ್ರಾತ್ ಮೊದಲ ಸ್ಥಾನದಲ್ಲಿದ್ದಾರೆ.

40 ಪಂದ್ಯಗಳಲ್ಲಿ 68 ವಿಕೆಟ್ ಪಡೆದಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 2ನೇ ಸ್ಥಾನದಲ್ಲಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ಲಸಿತ್ ಮಾಲಿಂಗ 29 ಪಂದ್ಯಗಳಲ್ಲಿ 56 ವಿಕೆಟ್ ಪಡೆದಿದ್ದಾರೆ.

ಸದ್ಯ ಮಿಚೆಲ್ ಸ್ಟಾರ್ಕ್ 22 ಪಂದ್ಯಗಳಲ್ಲಿ 55 ವಿಕೆಟ್‌ ಪಡೆದು ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಮಿಚೆಲ್ ಸ್ಟಾರ್ಕ್ ವಾಸಿಂ ಅಕ್ರಂ ಅವರಿಗಿಂತ ವೇಗವಾಗಿ 55 ವಿಕೆಟ್ ಪಡೆದಿರುವುದು ಗಮನಾರ್ಹ.

Mitchell Starc equals Wasim Akram record on highest wicket-takers list in World Cup