ಭಾರತದ ಯುವ ಬ್ಯಾಟ್ಸ್‌ಮನ್ ಮುಶೀರ್ ಖಾನ್ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದು, ಅವರ ಕುತ್ತಿಗೆಯ ಭಾಗಕ್ಕೆ ತೀವ್ರತರಹದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
Pic credit: Google
ಅಕ್ಟೋಬರ್ 1ರಿಂದ ಆರಂಭವಾಗಲಿರುವ ಇರಾನಿ ಕಪ್ ಪಂದ್ಯಕ್ಕೆ ತಂದೆ ನೌಶಾದ್ ಜತೆ ಅಜಂಗಢದಿಂದ ಲಖನೌಗೆ ತೆರಳುತ್ತಿದ್ದ ಮುಶೀರ್ ಖಾನ್ ಎಕ್ಸ್ಪ್ರೆಸ್ ವೇಯಲ್ಲಿನ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾರೆ.
Pic credit: Google
ಆ ಬಳಿಕ ಮುಶೀರ್ ಅವರನ್ನು ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಮಾರು 3 ತಿಂಗಳ ಕಾಲ ಅವರು ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Pic credit: Google
ಈ ಅವಘಡದಿಂದಾಗಿ 19ರ ಹರೆಯದ ಮುಶೀರ್ ಇರಾನಿ ಕಪ್ನೊಂದಿಗೆ ಆರಂಭವಾಗಲಿರುವ ಮುಂದಿನ 3 ಟೂರ್ನಿಗಳಲ್ಲಿ ಆಡುವುದು ಕಷ್ಟಕರವಾಗಿದೆ.
Pic credit: Google
ಇರಾನಿ ಕಪ್‌ನಲ್ಲಿ ಕೇವಲ ಒಂದು ಪಂದ್ಯವನ್ನು ಆಡಲಾಗುತ್ತದೆ. ಆ ಬಳಿಕ ರಣಜಿ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ನಡೆಯಲ್ಲಿದೆ.
Pic credit: Google
ರಣಜಿ ಟ್ರೋಫಿಯ ಮೊದಲ ಹಂತವು ಅಕ್ಟೋಬರ್ 11 ರಿಂದ ನವೆಂಬರ್ 16 ರವರೆಗೆ ನಡೆಯುಲ್ಲಿದ್ದು, ಆ ನಂತರ ನವೆಂಬರ್ 23 ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆರಂಭವಾಗಲಿದೆ.
Pic credit: Google
ಈ ಎರಡು ಪ್ರಮುಖ ಟೂರ್ನಿಗಳಲ್ಲಿ ಮುಶೀರ್ ಖಾನ್ ಆಡುವುದು ಅನುಮಾನವಾಗಿದೆ. ಆಡಿದರೂ ಸಹ ಅವರು ಆರಂಭಿಕ ಕೆಲವು ಪಂದ್ಯಗಳಲ್ಲಿ ಆಡುವುದು ಅಸಾಧ್ಯವಾಗಿದೆ.