Us Open 2024: ಅಲ್ಕರಾಝ್ ಬಳಿಕ ಜೊಕೊವಿಚ್ ಕೂಡ ಟೂರ್ನಿಯಿಂದ ಔಟ್

31 August 2024

Pic credit: Google

ಪೃಥ್ವಿ ಶಂಕರ

Pic credit: Google

ಟೆನಿಸ್ ವೃತ್ತಿಜೀವನದಲ್ಲಿ  ಬರೋಬ್ಬರಿ 18 ವರ್ಷಗಳ ನಂತರ ನೊವಾಕ್ ಜೊಕೊವಿಚ್ ಹೀನಾಯ ಸೋಲುಗೆ ಕೊರಳೊಡ್ಡಿದ್ದಾರೆ.

Pic credit: Google

ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೊವಾಕ್ ಜೊಕೊವಿಚ್ ಯುಎಸ್ ಓಪನ್‌ನ ಮೂರನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

Pic credit: Google

ವಿಶ್ವದ 28ನೇ ಶ್ರೇಯಾಂಕದ ಆಸ್ಟ್ರೇಲಿಯನ್ ಆಟಗಾರ ಅಲೆಕ್ಸಿ ಪಾಪಿರಿನ್ ಯುಎಸ್ ಓಪನ್‌ನಲ್ಲಿ ಎರಡನೇ ಶ್ರೇಯಾಂಕದ ಜೊಕೊವಿಚ್ ಅವರನ್ನು 6-4, 6-4, 2-6 ಮತ್ತು 6-4 ಸೆಟ್‌ಗಳಿಂದ ಸೋಲಿಸಿದರು.

Pic credit: Google

ಈ ಸೋಲಿನನೊಂದಿಗೆ 18 ವರ್ಷಗಳ ನಂತರ ಜೊಕೊವಿಚ್ ಇಂತಹ ಸೋಲಿನ ಶಾಕ್​ಗೆ ಒಳಗಾಗಿದ್ದಾರೆ. ಇದಕ್ಕೂ ಮುನ್ನ 2005-06ರ ಆವೃತ್ತಿಯಲ್ಲಿ ಮೂರನೇ ಸುತ್ತಿನಲ್ಲಿ ಸೋತು ಯುಎಸ್​ ಓಪನ್‌ನಿಂದ ಹೊರಗುಳಿದಿದ್ದರು.

Pic credit: Google

ಈ ಸೋಲಿನೊಂದಿಗೆ ನೊವಾಕ್ ಜೊಕೊವಿಚ್ ದಾಖಲೆಯ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ.

Pic credit: Google

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಕಳೆದ 24 ಗಂಟೆಗಳಲ್ಲಿ ಯುಎಸ್‌ ಓಪನ್‌ನಲ್ಲಿ ಎರಡು ಆಘಾತಗಳು ಎದುರಾಗಿದ್ದು, ಜೊಕೊವಿಚ್​ಗೂ ಕಾರ್ಲೋಸ್ ಅಲ್ಕರಾಝ್ ಕೂಡ ಎರಡನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು

Pic credit: Google

ವಿಶ್ವದ 3ನೇ ಶ್ರೇಯಾಂಕದ ಆಟಗಾರ ಕಾರ್ಲೋಸ್ ಅಲ್ಕರಾಝ್ ಅವರನ್ನು 78ನೇ ಶ್ರೇಯಾಂಕದ ಆಟಗಾರ ಬೊಟಿಕ್ ವ್ಯಾನ್ ಡಿ ಝಾಂಡ್‌ಸ್ಚುಲ್ಪ್ ಸೋಲಿಸಿದರು.

Pic credit: Google

ಇತ್ತೀಚೆಗೆ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ ಗೆದ್ದಿದ್ದ ಅಲ್ಕರಾಝ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಇದರ ಹೊರತಾಗಿ, ಅವರು ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್​ಗೂ ಎಂಟ್ರಿಕೊಡಲಿಲ್ಲ.