ಧೋನಿ ವೃತ್ತಿಜೀವನದಲ್ಲಿ ಡಿಸೆಂಬರ್ 23 ಏಕೆ ತುಂಬಾ ವಿಶೇಷ?

23 December 2024

Pic credit: Google

ಪೃಥ್ವಿ ಶಂಕರ

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ಜುಲೈ 7, ಏಪ್ರಿಲ್ 2 ಮತ್ತು ಇನ್ನೂ ಹಲವು ದಿನಾಂಕಗಳು ಬಹಳ ಮುಖ್ಯವಾಗಿವೆ.

Pic credit: Google

ಆದರೆ, ಡಿಸೆಂಬರ್ 23 ರ ದಿನಾಂಕ ಮಾತ್ರ ಧೋನಿ ವೃತ್ತಿ ಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ.

Pic credit: Google

ಅಷ್ಟಕ್ಕೂ ಈ ದಿನಾಂಕ ಧೋನಿಗೆ ಏಕೆ ವಿಶೇಷವೆಂದರೆ 20 ವರ್ಷಗಳ ಹಿಂದೆ ಅಂದರೆ 2004 ರಲ್ಲಿ, ಡಿಸೆಂಬರ್ 23 ರಂದು, ಧೋನಿ ವಿಶ್ವ ಕ್ರಿಕೆಟ್‌ಗೆ ಮೊದಲ ಹೆಜ್ಜೆ ಇಟ್ಟಿದ್ದರು.

Pic credit: Google

23 ಡಿಸೆಂಬರ್ 2004 ರಂದು, ಧೋನಿ ಬಾಂಗ್ಲಾದೇಶದ ವಿರುದ್ಧ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಈ ಏಕದಿನ ಪಂದ್ಯ ಢಾಕಾದಲ್ಲಿ ನಡೆದಿತ್ತು.

Pic credit: Google

ಆದರೆ ಧೋನಿ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಹೀಗಾಗಿ ಧೋನಿಗೆ ಚೊಚ್ಚಲ ಪಂದ್ಯ ಅಷ್ಟೊಂದು ಸ್ಮರಣೀಯವಾಗಿರಲಿಲ್ಲ.

Pic credit: Google

ಆದರೆ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದರ ಹಿಂದೆ ಒಂದರಂತೆ ಯಶಸ್ಸಿನ ಕಥೆ ಬರೆಯುತ್ತಾ ಹೋದರು.

Pic credit: Google

ಟೀಂ ಇಂಡಿಯಾ ಪರ ಎಲ್ಲಾ ಮೂರು ಪ್ರಮುಖ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ದಾಖಲೆಯನ್ನು ಧೋನಿ ಬರೆದರು.

Pic credit: Google

ಧೋನಿ ಒಟ್ಟು 538 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 17092 ರನ್ ಗಳಿಸಿದ್ದಾರೆ.

Pic credit: Google