ಫ್ಯಾನ್ಸ್ ಬಳಿ ಕ್ಷಮೆಯಾಚಿಸಿದ ಪಾಕ್ ನಾಯಕ ಶಾನ್ ಮಸೂದ್

26 August 2024

Pic credit: Google

ಪೃಥ್ವಿ ಶಂಕರ

Pic credit: Google

2024 ರ ಟಿ20 ವಿಶ್ವಕಪ್‌ನಲ್ಲಿ ಲೀಗ್ ಸುತ್ತಿನಲ್ಲಿ ಹೊರಗುಳಿದಿದ್ದ ಪಾಕ್ ತಂಡ ಸುಮಾರು 2 ತಿಂಗಳ ನಂತರ ಮೈದಾನಕ್ಕೆ ಮರಳಿದ್ದು, ಮೊದಲ ಪಂದ್ಯದಲ್ಲೇ ಹೀನಾಯ ಸೋಲನುಭವಿಸಿದೆ.

Pic credit: Google

ವಿಶ್ವಕಪ್‌ನಲ್ಲಿ ಅಮೆರಿಕದಂತಹ ಕ್ರಿಕೆಟ್ ಶಿಶು ತಂಡದ ವಿರುದ್ಧ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ, ಇದೀಗ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಹೀನಾಯವಾಗಿ ಸೋತಿದೆ.

Pic credit: Google

ತನ್ನ ತವರು ನೆಲವಾದ ರಾವಲ್ಪಿಂಡಿಯಲ್ಲಿಯೇ ಪಾಕಿಸ್ತಾನವು 10 ವಿಕೆಟ್‌ಗಳಿಂದ ಹೀನಾಯ ಸೋಲನ್ನು ಕಂಡಿದ್ದರೆ, ಇತ್ತ ಬಾಂಗ್ಲಾದೇಶವು ಪಾಕಿಸ್ತಾನವನ್ನು ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಸೋಲಿಸಿದೆ.

Pic credit: Google

ಪಾಕಿಸ್ತಾನದ ಈ ಸೋಲು ತಂಡಕ್ಕೆ ಮಾತ್ರವಲ್ಲದೆ ಅದರ ಅಭಿಮಾನಿಗಳಿಗೂ ಆಘಾತಕಾರಿ ಮತ್ತು ಮುಜುಗರ ತಂದಿದೆ.

Pic credit: Google

ಹೀಗಾಗಿ ಸೋಲಿನ ನಂತರ ಪಾಕಿಸ್ತಾನದ ನಾಯಕ ಶಾನ್ ಮಸೂದ್ ಇಂತಹ ಕಳಪೆ ಪ್ರದರ್ಶನಕ್ಕಾಗಿ ಅಭಿಮಾನಿಗಳು ಮತ್ತು ಇಡೀ ದೇಶದ ಕ್ಷಮೆಯಾಚಿಸಿದ್ದಾರೆ.

Pic credit: Google

ನಾವು ನಮ್ಮ ತಪ್ಪನ್ನು ಒಪ್ಪಿಕೊಂಡಿದ್ದೇವೆ. ಉತ್ತಮ ಪ್ರದರ್ಶನ ಮತ್ತು ಫಲಿತಾಂಶವನ್ನು ನೀಡಲು ತಂಡ ವಿಫಲವಾಗಿದೆ ಎಂದು ಕ್ಷಮೆಯಾಚಿಸುತ್ತೇನೆ.

Pic credit: Google

ಈ ಪಂದ್ಯದಲ್ಲಿ ತಮ್ಮ ತಂಡವು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರಲಿಲ್ಲ. ಪ್ರತಿಯೊಬ್ಬರೂ ತಮ್ಮ 100 ಪ್ರತಿಶತವನ್ನು ನೀಡಿದ್ದಾರೆ ಎಂದು ಮಸೂದ್ ಹೇಳಿಕೊಂಡಿದ್ದಾರೆ.