ಭಗವದ್ಗೀತೆಯಲ್ಲಿ ಅಡಗಿದೆ ಮನು ಭಾಕರ್ ಒಲಿಂಪಿಕ್ಸ್ ಪದಕದ ರಹಸ್ಯ..!

28 July 2024

Pic credit: Google

ಪೃಥ್ವಿ ಶಂಕರ

Pic credit: Google

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆಯಲಾಗಿದೆ. ಶೂಟರ್ ಮನು ಭಾಕರ್ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.

Pic credit: Google

ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Pic credit: Google

ಫೈನಲ್‌ನಲ್ಲಿ ಮನು ಭಾಕರ್ ಒಟ್ಟು 221.7 ಅಂಕ ಸಂಪಾಧಿಸಿ 3ನೇ ಸ್ಥಾನ ಪಡೆದರು. ಅದೇ ಸಮಯದಲ್ಲಿ ಕೊರಿಯಾದ ಓಹ್ ಯೆ ಜಿನ್ 243.2 ಅಂಕಗಳೊಂದಿಗೆ ಚಿನ್ನ ಮತ್ತು ಕೊರಿಯಾದ ಕಿಮ್ ಯೆಜಿ ಬೆಳ್ಳಿ ಪದಕ ಗೆದ್ದರು.

Pic credit: Google

ಪದಕ ಗೆದ್ದ ನಂತರ ಜಿಯೋಸಿನಿಮಾ ಜೊತೆ ಮಾತನಾಡಿದ ಮನು ಭಾಕರ್, ಭಗವದ್ಗೀತೆಯಲ್ಲಿನ ಸಾಲುಗಳು ನನ್ನ ಗೆಲುವಿನಲ್ಲಿ ಹೇಗೆ ಪಾತ್ರವಹಿಸಿದವು ಎಂಬುದನ್ನು ವಿವರಿಸಿದ್ದಾರೆ.

Pic credit: Google

‘ನಾನು ಭಗವದ್ಗೀತೆಯನ್ನು ಹೆಚ್ಚು ಓದಿದ್ದೇನೆ. ಅದರಲ್ಲಿ ನಿನ್ನ ಕೆಲಸ ನೀ ಮಾಡು ಫಲಾಫಲ ನನಗೆ ಬಿಡು ಅಂತ ಕೃಷ್ಣ ಹೇಳಿರುವ ಮಾತು ಕೊನೆಯ ಕ್ಷಣಗಳಲ್ಲಿ ನನ್ನ ಮನಸ್ಸಿನಲ್ಲಿತ್ತು' ಎಂದಿದ್ದಾರೆ.

Pic credit: Google

ಮನು ಭಾಕರ್ ಕಳೆದ 7 ವರ್ಷಗಳಿಂದ ಶೂಟಿಂಗ್​ನಲ್ಲಿ ಸ್ಪರ್ಧಿಸುತ್ತಿದ್ದು, ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ISSF ವಿಶ್ವಕಪ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ.