ಪಾಕ್ ಹಾಕಿ ತಂಡಕ್ಕೆ ಕೇವಲ 8400 ರೂ. ಬಹುಮಾನ

18 september 2024

Pic credit: Google

ಪೃಥ್ವಿ ಶಂಕರ

Pic credit: Google

2024ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ ಗೆದ್ದ ಪಾಕಿಸ್ತಾನ ತಂಡಕ್ಕೆ ಹಾಕಿ ಫೆಡರೇಶನ್ ಬಹುಮಾನ ಘೋಷಿಸಿದೆ.

Pic credit: Google

ಅದರಂತೆ ಕಂಚಿನ ಪದಕ ಗೆದ್ದ ಪಾಕ್ ಹಾಕಿ ತಂಡ ಕೇವಲ 100 ಡಾಲರ್​ಗಳನ್ನು ಅಂದರೆ ಭಾರತೀಯ ಕರೆನ್ಸಿಯಲ್ಲಿ ಕೇವಲ 8400 ರೂಪಾಯಿಗಳನ್ನು ಬಹುಮಾನವನ್ನಾಗಿ ಪಡೆದಿದೆ.

Pic credit: Google

ವಾಸ್ತವವಾಗಿ ಪಾಕಿಸ್ತಾನದ ಹಾಕಿ ತಂಡ ದುಸ್ತಿಯಲ್ಲಿದೆ. ಆಟಗಾರರಿಗೆ ಸರಿಯಾದ ಸಮಯಕ್ಕೆ ಸಂಬಳವೂ ಸಿಗುತ್ತಿಲ್ಲ. ಇದರ ಜೊತೆಗೆ ಇದೀಗ ಅವರಿಗೆ ಕಡಿಮೆ ಮೊತ್ತದ ಬಹುಮಾನ ನೀಡಲಾಗಿದೆ.

Pic credit: Google

ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನವು ದಕ್ಷಿಣ ಕೊರಿಯಾವನ್ನು 5-2 ಗೋಲುಗಳಿಂದ ಸೋಲಿಸಿ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತು.

Pic credit: Google

ಈ ಲೀಗ್​ನಲ್ಲಿ ಪಾಕಿಸ್ತಾನ ತಂಡವನ್ನು ಪ್ರಶಸ್ತಿ ಸುತ್ತಿನ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ ಈ ತಂಡ ಸೆಮಿಫೈನಲ್‌ನಲ್ಲಿ ಚೀನಾ ವಿರುದ್ಧ ನಾಚಿಕೆಗೇಡಿನ ಸೋಲು ಕಂಡಿದೆ.

Pic credit: Google

ಇನ್ನು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಚೀನಾ ತಂಡವನ್ನು 1-0 ಅಂತರದಲ್ಲಿ ಸೋಲಿಸಿದ ಭಾರತ ತಂಡ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.