ಮಿತಿ ಮೀರಿದ ತೂಕ; ಸ್ಟಾರ್ ಕ್ರಿಕೆಟಿಗನಿಗೆ ತಂಡದಿಂದ ಗೇಟ್ ಪಾಸ್

23 october 2024

Pic credit: Google

ಪೃಥ್ವಿ ಶಂಕರ

Pic credit: Google

ಒಂದು ಸಮಯದಲ್ಲಿ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಆರಂಭಿಕ ಆಟಗಾರ ಪೃಥ್ವಿ ಶಾ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದು ವರ್ಷಗಳೇ ಕಳೆದಿವೆ.

Pic credit: Google

ಆದಾಗ್ಯೂ ತಂಡದಲ್ಲಿ ಸ್ಥಾನ ಪಡೆಯುವ ಸಲುವಾಗಿ ಪೃಥ್ವಿ ಶಾ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ದೇಶೀ ಟೂರ್ನಿಯಲ್ಲೂ ಆಡುತ್ತಿದ್ದಾರೆ.

Pic credit: Google

ಆದರೆ ಪೃಥ್ವಿ ಶಾಗೆ ಯಾವ ದೇಶೀ ಪಂದ್ಯಾವಳಿಯಲ್ಲೂ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಒಂದು ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರೆ, ಉಳಿದ ನಾಲ್ಕೈದು ಪಂದ್ಯಗಳಲ್ಲಿ ಅವರ ಪ್ರದರ್ಶನ ಸಪ್ಪೆಯಾಗಿರುತ್ತದೆ.

Pic credit: Google

ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಪೃಥ್ವಿ ಶಾ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿಯುತ್ತಿದ್ದರು. ಆದರೆ ಇದೀಗ ಪೃಥ್ವಿ ಶಾರನ್ನು ಮುಂಬೈ ತಂಡದಿಂದ ಕೈಬಿಡಲಾಗಿದೆ.

Pic credit: Google

ಪೃಥ್ವಿ ಶಾ ಅವರ ತಂಡದಿಂದ ಕೈಬಿಡಲು ಅವರ ಕಳಪೆ ಫಾರ್ಮ್​ ಒಂದು ಕಾರಣವಾದರೆ, ಅವರ ಅತಿಯಾದ ತೂಕವೂ ಅವರನ್ನು ತಂಡದಿಂದ ಹೊರಗಿಡಲು ಇನ್ನೊಂದು ಪ್ರಮುಖ ಕಾರಣವಾಗಿದೆ.

Pic credit: Google

ಕೇವಲ 24 ವರ್ಷ ವಯಸ್ಸಿನ ಪೃಥ್ವಿ ಶಾ ಅವರ ತೂಕ ಅತಿಯಾಗಿದ್ದು, ಅವರ ದೇಹದಲ್ಲಿ ಕೊಬ್ಬಿನಾಂಶ ಶೇಕಡ 35 ರಷ್ಟಿದೆ ಎಂದು ವರದಿಯಾಗಿದೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

Pic credit: Google

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪೃಥ್ವಿ ಶಾ ಅವರು ತೂಕವನ್ನು ಕಡಿಮೆ ಮಾಡಲು ಸಿಹಿತಿಂಡಿಗಳು, ತಂಪು ಪಾನೀಯ ಮತ್ತು ಚೈನೀಸ್ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿದ್ದೇನೆ ಎಂದು ಹೇಳಿದ್ದರು.

Pic credit: Google

ಹೀಗಾಗಿ ಐಪಿಎಲ್ 2023 ರ ನಂತರ ಶಾ ಅವರ ತೂಕ ಗಮನಾರ್ಹವಾಗಿ ಕಡಿಮೆಯಾಗಿತ್ತು. ಆದರೆ ಈಗ ಅವರು ಮತ್ತೊಮ್ಮೆ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

Pic credit: Google

ಇದೇ ಮುಂದುವರೆದರೆ ಅವರು ರಣಜಿ ತಂಡಕ್ಕೆ ಮರಳುವುದು ಕಷ್ಟ. ಅಲ್ಲದೆ, ಐಪಿಎಲ್‌ನಲ್ಲೂ ಖರೀದಿದಾರರನ್ನು ಹುಡುಕುವುದು ಅವರಿಗೆ ಕಷ್ಟವಾಗುತ್ತದೆ.