ಏಕದಿನದಲ್ಲಿ ಇತಿಹಾಸ ಬರೆದ ರೇಣುಕಾ ಸಿಂಗ್ ಠಾಕೂರ್

23 December 2024

Pic credit: Google

ಪೃಥ್ವಿ ಶಂಕರ

ಭಾರತ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 211 ರನ್ ಗಳಿಂದ ಸೋಲಿಸಿದೆ.

Pic credit: Google

ಭಾನುವಾರ ನಡೆದ ಪಂದ್ಯದಲ್ಲಿ ಗೆಲುವಿನೊಂದಿಗೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Pic credit: Google

ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಮಂಗಳವಾರ ನಡೆಯಲಿದ್ದು, ಇದರಲ್ಲಿ ಟೀಂ ಇಂಡಿಯಾ ಅಜೇಯ ಮುನ್ನಡೆ ದಾಖಲಿಸುವ ಗುರಿ ಹೊಂದಿದೆ.

Pic credit: Google

ವಡೋದರಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಸ್ಮೃತಿ ಮಂಧಾನ ಅವರ 91 ರನ್‌ಗಳ ಪ್ರಬಲ ಇನ್ನಿಂಗ್ಸ್‌ನಿಂದಾಗಿ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 314 ರನ್ ಗಳಿಸಿತು.

Pic credit: Google

ಉತ್ತರವಾಗಿ ಪ್ರವಾಸಿ ತಂಡ 26.2 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಆತಿಥೇಯರ ಪರ ರೇಣುಕಾ ಸಿಂಗ್ ಐದು ವಿಕೆಟ್ ಪಡೆದರು.

Pic credit: Google

ರೇಣುಕಾ 10 ಓವರ್ ಗಳಲ್ಲಿ 29 ರನ್ ನೀಡಿ ಐದು ವಿಕೆಟ್ ಪಡೆದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ ಮೊದಲ ಐದು ವಿಕೆಟ್ ಸಾಧನೆಯಾಗಿದೆ.

Pic credit: Google

ಈ ಮೂಲಕ ಅವರು ಏಕದಿನದಲ್ಲಿ ಐದು ವಿಕೆಟ್‌ ಪಡೆದ ಭಾರತದ ನಾಲ್ಕನೇ ಬೌಲರ್‌ ಎನಿಸಿಕೊಂಡರು. ಇದರೊಂದಿಗೆ ಅವರು ಪೂರ್ಣಿಮಾ ಚೌಧರಿ, ಮಮತಾ ಮೆಬೆನ್ ಮತ್ತು ಜೂಲನ್ ಗೋಸ್ವಾಮಿ ಅವರ ಕ್ಲಬ್ ಸೇರಿದರು.

Pic credit: Google