‘ಧನ್ಯವಾದಗಳು’; ಸಿಡ್ನಿ ಟೆಸ್ಟ್‌ಗೂ ಮುನ್ನ ರೋಹಿತ್ ಭಾವುಕ ಪೋಸ್ಟ್

01 January 2025

Pic credit: Google

ಪೃಥ್ವಿ ಶಂಕರ

ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 184 ರನ್‌ಗಳ ಹೀನಾಯ ಸೋಲಿನೊಂದಿಗೆ, ಟೀಂ ಇಂಡಿಯಾ ಸರಣಿಯಲ್ಲಿ 1-2 ರಿಂದ ಹಿನ್ನಡೆ ಅನುಭವಿಸಿದೆ.

Pic credit: Google

ಇದೀಗ ಸರಣಿಯ ಐದನೇ ಮತ್ತು ಕೊನೆಯ ಪಂದ್ಯವು ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಲು ರೋಹಿತ್ ಪಡೆ ನೋಡುತ್ತಿದೆ.

Pic credit: Google

ಈ ನಡುವೆ ತಂಡದ ಕಳಪೆ ಪ್ರದರ್ಶನದ ಜೊತೆಗೆ ನಾಯಕನಾಗಿಯೂ ವಿಫನಾಗಿರುವ ರೋಹಿತ್ ಶರ್ಮಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Pic credit: Google

ಇದರ ಜೊತೆಗೆ ರೋಹಿತ್ ಸಿಡ್ನಿ ಟೆಸ್ಟ್ ಬಳಿಕ ನಿವೃತ್ತಿಯಾಗಬೇಕು ಅಥವಾ ಕೊನೆಯ ಪಂದ್ಯದಿಂದ ಕೈಬಿಡಬೇಕು ಎಂಬ ಒತ್ತಡ ಹೆಚ್ಚುತ್ತಿದೆ.

Pic credit: Google

ಈ ಎಲ್ಲದರ ನಡುವೆ, ಸಿಡ್ನಿ ಟೆಸ್ಟ್‌ಗೆ ಮುನ್ನ ರೋಹಿತ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವನಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Pic credit: Google

ನಿವೇಲ್ಲ ಅಂದುಕೊಳ್ಳುತ್ತಿರುವಂತೆ ರೋಹಿತ್ ಟೆಸ್ಟ್ ಮಾದರಿಗೆ ವಿದಾಯ ಹೇಳಿಲ್ಲ. ಬದಲಿಗೆ ಅವರು 2024 ರ ವರ್ಷಕ್ಕೆ ಧನ್ಯವಾದ ತಿಳಿಸಿದ್ದಾರೆ.

Pic credit: Google

ರೋಹಿತ್ ಶರ್ಮಾಗೆ 2024 ಸಾಕಷ್ಟು ಏರಿಳಿತಗಳಿಂದ ಕೂಡಿತ್ತು. ವರ್ಷಾಂತ್ಯದಲ್ಲಿ ತಂಡ ಸೋಲಿನ ಸುಳಿಗೆ ಸಿಲುಕಿದ್ದರೂ ಅವರ ನಾಯಕತ್ವದಲ್ಲಿ ತಂಡ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು.

Pic credit: Google