ಬಾಂಗ್ಲಾದೇಶ ವಿರುದ್ಧ ರೋಹಿತ್ ಶರ್ಮಾ ಟೆಸ್ಟ್ ದಾಖಲೆ ತೀರ ಕಳಪೆ
19 August 2024
Pic credit: Google
ಪೃಥ್ವಿ ಶಂಕರ
Pic credit: Google
ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಇದೇ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದೆ.
Pic credit: Google
ಈ ಸರಣಿಯೊಂದಿಗೆ ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ ಪ್ರಯಾಣವೂ ಮತ್ತೊಮ್ಮೆ ಆರಂಭವಾಗಲಿದೆ.
Pic credit: Google
ಈ ಸರಣಿಯಲ್ಲಿ ಎಲ್ಲರ ಕಣ್ಣುಗಳು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಮೇಲಿರಲಿದೆ. ಏಕೆಂದರೆ ಬಾಂಗ್ಲಾದೇಶ ವಿರುದ್ಧ ರೋಹಿತ್ ಸಾಧನೆ ಅಷ್ಟಕಷ್ಟೆ.
Pic credit: Google
ರೋಹಿತ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ತಂಡಗಳ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧದ ಅವರ ದಾಖಲೆ ತುಂಬಾ ಕಳಪೆಯಾಗಿದೆ.
Pic credit: Google
ನಂಬುವುದು ಕಷ್ಟ. ಆದರೆ ಬಾಂಗ್ಲಾದೇಶದ ವಿರುದ್ಧ ಶತಕ ಅಥವಾ ಅರ್ಧಶತಕವಿರಲಿ, ರೋಹಿತ್ ಶರ್ಮಾ ಒಟ್ಟು 50 ರನ್ ಗಳಿಸಲು ಸಾಧ್ಯವಾಗಿಲ್ಲ.
Pic credit: Google
ಹೌದು, ರೋಹಿತ್ ಬಾಂಗ್ಲಾದೇಶ ವಿರುದ್ಧದ 3 ಟೆಸ್ಟ್ ಪಂದ್ಯಗಳ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 33 ರನ್ ಮಾತ್ರ ಬಾರಿಸಿದ್ದಾರೆ. ಇದು ಯಾವುದೇ ತಂಡದ ವಿರುದ್ಧ ಟೆಸ್ಟ್‌ನಲ್ಲಿ ರೋಹಿತ್ ಅವರ ಕೆಟ್ಟ ದಾಖಲೆಯಾಗಿದೆ.
Pic credit: Google
ಹೀಗಾಗಿ ಮುಂಬರುವ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ, ಈ ಕಳಪೆ ದಾಖಲೆಯನ್ನು ಮುರಿದು ಬಾಂಗ್ಲಾ ವಿರುದ್ಧ ಬಿಗ್ ಇನ್ನಿಂಗ್ಸ್ ಆಡಬೇಕಾಗಿದೆ.