ರೋಹಿತ್​ಗೆ ಟಿ20 ವಿಶ್ವಕಪ್ ಟ್ರೋಫಿಯೇ ನೂತನ ಸಂಗಾತಿ!

01  July 2024

Pic credit - BCCI Twitter Account 

ಪೃಥ್ವಿಶಂಕರ

Pic credit - BCCI

9 ನೇ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಟೀಂ ಇಂಡಿಯಾ ದಾಖಲೆಯ ಎರಡನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾರತ ಚಾಂಪಿಯನ್

Pic credit - BCCI

ಟಿ20 ವಿಶ್ವಕಪ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ ತಂಡದ ಮೂವರು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಈ ಮಾದರಿಗೆ ವಿದಾಯ ಹೇಳಿದ್ದರು.

ಮೂವರ ವಿದಾಯ

Pic credit - BCCI

ಇದರರ್ಥ ಈ ಮಾದರಿಯಲ್ಲಿ ಈ ಮೂವರು ದಿಗ್ಗಜರು ಇನ್ನು ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂಬುದು. ಹೀಗಾಗಿ ಈ ಟ್ರೋಫಿಯೊಂದಿಗೆ ಈ ಮೂವರನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ.

ಫ್ಯಾನ್ಸ್ ಕಾತುರ

Pic credit - BCCI

ಆದರೆ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮುಗಿದು ಎರಡು ದಿನವಾಗಿದ್ದರೂ ಟೀಂ ಇಂಡಿಯಾ ಭಾರತಕ್ಕೆ ಬಂದಿಲ್ಲ. ಅದಕ್ಕೆ ಕಾರಣ ಬಾರ್ಬಡೋಸ್​ನಲ್ಲಿನ ಕೆಟ್ಟ ಹವಮಾನ.

ಕೆಟ್ಟ ಹವಾಮಾನ

Pic credit - BCCI

ಅದಾಗ್ಯೂ, ಬಾರ್ಬಡೋಸ್​ನಲ್ಲಿಯೇ ಕಾಲಕಳೆಯುತ್ತಿರುವ ಟೀಂ ಇಂಡಿಯಾ ಆಟಗಾರರು ವಿಶ್ವಕಪ್ ಗೆಲುವಿನ ಅಮಲಿನಲ್ಲಿ ತೇಲುತ್ತಿದ್ದಾರೆ.

ಜಯದ ಅಮಲು

Pic credit - BCCI

ಅದರಲ್ಲೂ ನಾಯಕನಾಗಿ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ ರೋಹಿತ್ ಶರ್ಮಾಗೆ ಟಿ20 ವಿಶ್ವಕಪ್ ಟ್ರೋಫಿಯೇ ನೂತನ ಸಂಗಾತಿಯಂತ್ತಾಗಿದೆ. ಈ ಟ್ರೋಫಿಯೊಂದಿಗೆಯೇ ರೋಹಿತ್ ಅವರ ಊಟ, ನಿದ್ರೆ ಎಲ್ಲ.

ರೋಹಿತ್ ಶರ್ಮಾ

Pic credit - BCCI

ಪ್ರಸ್ತುತ ಬಾರ್ಬಡೋಸ್​ನಲ್ಲಿರುವ ರೋಹಿತ್ ಶರ್ಮಾ, ವಿಶ್ವಕಪ್ ಟ್ರೋಫಿಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದು, ಅದನ್ನು ತಮ್ಮ ಪಕ್ಕದಲ್ಲಿಯೇ ಇರಿಸಿಕೊಂಡು ನಿದ್ರೆಗೆ ಜಾರುತ್ತಿದ್ದಾರೆ.

ಟ್ರೋಫಿ ಜೊತೆ ನಿದ್ರೆ

Pic credit - BCCI

ಅದರ ಫೋಟೋವನ್ನು ತಮ್ಮ ಇನ್ಸ್​ಟಾಗ್ರಾಮ್​ ಖಾತೆಯಲ್ಲಿ ರೋಹಿತ್ ಶರ್ಮಾ ಹಂಚಿಕೊಂಡಿದ್ದಾರೆ. ಇದರರ್ಥ ರೋಹಿತ್​ಗೆ ಈ ಟ್ರೋಫಿ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಸಾಭೀತುಪಡಿಸುತ್ತದೆ.

ಇನ್ಸ್​ಟಾ ಪೋಸ್ಟ್