ಅಫ್ಘಾನಿಸ್ತಾನ ವಿರುದ್ಧದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ನಾಯಕ ಮತ್ತು ವಿಶ್ವದ ನಂಬರ್ ಒನ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
07 October 2023
ಅಫ್ಘಾನಿಸ್ತಾನ ವಿರುದ್ಧ ಮಾರಕ ಬೌಲಿಂಗ್ ಮಾಡಿದ ಶಕೀಬ್ 6 ಓವರ್‌ಗಳ ಮೊದಲ ಸ್ಪೆಲ್‌ನಲ್ಲಿ 3 ವಿಕೆಟ್ ಪಡೆದಿದ್ದಾರೆ.
ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
ಶಕೀಬ್, ನಜಿಬುಲ್ಲಾ ಝದ್ರಾನ್ ಅವರನ್ನು ಔಟ್ ಮಾಡುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ತಮ್ಮ 37 ನೇ ವಿಕೆಟ್ ಪೂರೈಸಿದರು.
ಇದರೊಂದಿಗೆ ಶಕೀಬ್ ಏಕದಿನ ವಿಶ್ವಕಪ್‌ನಲ್ಲಿ 36 ವಿಕೆಟ್ ಪಡೆದಿರುವ ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಇದಲ್ಲದೆ 2023ರ ಐಸಿಸಿ ವಿಶ್ವಕಪ್‌ನ ಸಕ್ರಿಯ ಆಟಗಾರರಲ್ಲಿ ಶಕೀಬ್ ಅತಿ ಹೆಚ್ಚು ವಿಕೆಟ್ ಪಡೆದಿರುವ ಮೊದಲ ಬೌಲರ್ ಕೂಡ ಆಗಿದ್ದಾರೆ.
ಸಕ್ರಿಯ ಆಟಗಾರರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಶಕೀಬ್ ಇಲ್ಲಿಯವರೆಗೆ 311 ಏಕದಿನ ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಬೌಲಿಂಗ್ ಅಲ್ಲದೆ ಬ್ಯಾಟಿಂಗ್ನಲ್ಲೂ ಮಿಂಚಿರುವ ಶಕೀಬ್, ವಿಶ್ವಕಪ್‌ನಲ್ಲಿ 12 ಬಾರಿ 50+ ಸ್ಕೋರ್ ದಾಖಲಿಸಿದ್ದಾರೆ.
ಇದನ್ನೂ ಓದಿ