ಶಿಖರ್ ಧವನ್ ಅವರು ಆಗಸ್ಟ್ 24 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ದೇಶೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಿಗೆ ನಿವೃತ್ತಿ ಘೋಷಿಸಿದ್ದರು.
Pic credit: Google
ಆದರೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಆಡುವುದಾಗಿ ಹೇಳಿಕೊಂಡಿದ್ದ ಶಿಖರ್ ಧವನ್, ಇದೀಗ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಅನೇಕ ಸ್ಟಾರ್ ಜೊತೆ ಅಖಾಡಕ್ಕಿಳಿಯಲ್ಲಿದ್ದಾರೆ.
Pic credit: Google
ಈ ಬಾರಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಶಿಖರ್ ಧವನ್ ಗುಜರಾತ್ ಲಯನ್ಸ್ ತಂಡದಲ್ಲಿ ಆಡಲಿದ್ದಾರೆ. ಕ್ರಿಸ್ ಗೇಲ್ ಕೂಡ ಈ ತಂಡದಲ್ಲಿದ್ದು, ಈ ಇಬ್ಬರೂ ಓಪನಿಂಗ್ ಮಾಡಬಹುದಾದ ಸಾಧ್ಯತೆಗಳಿವೆ.
Pic credit: Google
ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಇದಕ್ಕಾಗಿ ಆಟಗಾರರ ಹರಾಜು ಕೂಡ ನಡೆದಿದೆ. ಅನೇಕ ಅನುಭವಿ ಆಟಗಾರರು ಈ ಹರಾಜಿನಲ್ಲಿ ಖರೀದಿಯಾದರು.
Pic credit: Google
ಶಿಖರ್ ಧವನ್ ಹೊರತಾಗಿ, ಇತ್ತೀಚೆಗೆ ನಿವೃತ್ತರಾದ ದಿನೇಶ್ ಕಾರ್ತಿಕ್ ಕೂಡ ಮೊದಲ ಬಾರಿಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಭಾಗವಾಗಿದ್ದಾರೆ.
Pic credit: Google
2010ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆರಂಭಿಸಿದ ಶಿಖರ್ ಧವನ್ ಟೀಂ ಇಂಡಿಯಾ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ.
Pic credit: Google
ಶಿಖರ್ ಧವನ್ ಟೀಂ ಇಂಡಿಯಾ ಪರ 34 ಟೆಸ್ಟ್‌ಗಳಲ್ಲಿ 40.61 ಸರಾಸರಿಯಲ್ಲಿ 2315 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು 167 ಏಕದಿನ ಪಂದ್ಯಗಳಲ್ಲಿ 44.11 ರ ಸರಾಸರಿಯಲ್ಲಿ 7436 ರನ್ ಗಳಿಸಿದರು.
Pic credit: Google
ಟೀಂ ಇಂಡಿಯಾ ಪರ 68 ಟಿ20 ಪಂದ್ಯಗಳನ್ನಾಡಿರುವ ಧವನ್ 27.92 ಸರಾಸರಿಯಲ್ಲಿ 1759 ರನ್ ಗಳಿಸಿದ್ದಾರೆ.