ಟಿ20ಯಲ್ಲಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನ
20 December 2024
Pic credit: Google
ಪೃಥ್ವಿ ಶಂಕರ
ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಿನ್ನೆಯಷ್ಟೇ ಮುಕ್ತಾಯಗೊಂಡಿತು.
Pic credit: Google
ಈ ಸರಣಿಯನ್ನು ಆತಿಥೇಯ ಟೀಂ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
Pic credit: Google
ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಇದು ಟಿ20ಯಲ್ಲಿ ಭಾರತದ ಅತಿ ದೊಡ್ಡ ಸ್ಕೋರ್ ಆಗಿದೆ.
Pic credit: Google
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮತ್ತೆ ಅಬ್ಬರಸಿದ ಸ್ಮೃತಿ ಮಂಧಾನ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು.
Pic credit: Google
ಇದು ಮಂಧಾನ ಅವರ 30ನೇ ಟಿ20 ಅರ್ಧಶತಕವಾಗಿದ್ದು, ಇದರೊಂದಿಗೆ ಟಿ20ಯಲ್ಲಿ ಅಧಿಕ ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಮಹಿಳಾ ಬ್ಯಾಟ್ಸ್‌ಮನ್ ಎನಿಸಿಕೊಂಡರು.
Pic credit: Google
ಇದರ ಜತೆಗೆ ಈ ವಿಚಾರದಲ್ಲಿ ನ್ಯೂಜಿಲೆಂಡ್‌ನ ಸುಝೀ ಬೇಟ್ಸ್ (29) ಅವರನ್ನು ಮಂದಾನ ಹಿಂದಿಕ್ಕಿದರು.
Pic credit: Google
ಸ್ಮೃತಿ ಮಂಧಾನ ಈ ಪಂದ್ಯದಲ್ಲಿ 47 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದರು.
Pic credit: Google
Pic credit: Google
Pic credit: Google
ಕಾಂಬ್ಳಿಗಿಂತ ದುಪ್ಪಟ್ಟು ಪಿಂಚಣಿ ಪಡೆಯುವ ಸಚಿನ್ ತೆಂಡೂಲ್ಕರ್