16 ಬಾರಿ 50+ ಸ್ಕೋರ್; ಮತ್ತೊಂದು ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನ

24 December 2024

Pic credit: Google

ಪೃಥ್ವಿ ಶಂಕರ

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ಬ್ಯಾಟ್ ಪ್ರತಿ ಪಂದ್ಯದಲ್ಲೂ ಆಗಸ ನೋಡುತ್ತಿದೆ.

Pic credit: Google

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಸ್ಮೃತಿ ಮಂಧಾನ 53 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

Pic credit: Google

ಇದು ಸ್ಮೃತಿ ಅವರ ಏಕದಿನ ವೃತ್ತಿಜೀವನದ 29 ನೇ ಅರ್ಧಶತಕವಾಗಿದ್ದು, ಇದರ ಜೊತೆಗೆ ಈ ವರ್ಷ ಸ್ಮೃತಿ ಕಲೆಹಾಕಿದ 16ನೇ 50+ ಸ್ಕೋರ್ ಇದಾಗಿದೆ.

Pic credit: Google

ಹಾಗೆಯೇ ಕಳೆದ ಆರು ಪಂದ್ಯಗಳಲ್ಲೂ ಅಬ್ಬರ ಸೃಷ್ಟಿಸಿರುವ ಸ್ಮೃತಿ ಮಂಧಾನ ಸತತ ಆರನೇ ಬಾರಿಗೆ ಐವತ್ತು ಪ್ಲಸ್ ಸ್ಕೋರ್ ಗಳಿಸಿದ್ದಾರೆ.

Pic credit: Google

ಈ ಮೂಲಕ ಸ್ಮೃತಿ ಮಂಧಾನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ಫಿಫ್ಟಿ ಪ್ಲಸ್ ಸ್ಕೋರ್‌ ದಾಖಲಿಸಿದ ಮೊದಲ ಮಹಿಳಾ ಕ್ರಿಕೆಟ್ ಎಂಬ ದಾಖಲೆ ಬರೆದಿದ್ದಾರೆ.

Pic credit: Google

ಇದಲ್ಲದೆ ಈ ವರ್ಷ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ.

Pic credit: Google

Pic credit: Google

Pic credit: Google

Pic credit: Google

Pic credit: Google

Pic credit: Google