ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನ

22 December 2024

Pic credit: Google

ಪೃಥ್ವಿ ಶಂಕರ

ಸದ್ಯ ಸ್ಮೃತಿ ಮಂಧಾನ ಉತ್ತಮ ಫಾರ್ಮ್‌ನಲ್ಲಿದ್ದು, ಪ್ರಸಕ್ತ ವರ್ಷ ಕ್ರಿಕೆಟ್‌ನ ಪ್ರತಿಯೊಂದು ಮಾದರಿಯಲ್ಲೂ ರನ್ ಗಳಿಸಿದ್ದಾರೆ.

Pic credit: Google

ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಮಂಧಾನ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ.

Pic credit: Google

ವೀಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ 102 ಎಸೆತಗಳಲ್ಲಿ 91 ರನ್ ಗಳಿಸಿದರು. ಈ ದೊಡ್ಡ ದಾಖಲೆಯನ್ನು ಮಾಡಿದರು.

Pic credit: Google

91 ರನ್​ಗಳ ಇನ್ನಿಂಗ್ಸ್ ಮೂಲಕ ಸ್ಮೃತಿ ಮಂಧಾನ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಸ್ವರೂಪಗಳಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

Pic credit: Google

ಸ್ಮೃತಿ ಮಂಧಾನ ಈ ವರ್ಷ ಇಲ್ಲಿಯವರೆಗೆ 1602 ರನ್ ಗಳಿಸಿದ್ದು, ಒಂದು ವರ್ಷದಲ್ಲಿ 1600 ಅಂತರಾಷ್ಟ್ರೀಯ ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

Pic credit: Google

ಇದರೊಂದಿಗೆ ಸ್ಮೃತಿ ದಕ್ಷಿಣ ಆಫ್ರಿಕಾದ ಲಾರಾ ವೂಲ್ವರ್ತ್ ಅವರನ್ನು ಹಿಂದಿಕ್ಕಿದ್ದು, ವೂಲ್ವಾರ್ಟ್ ಈ ವರ್ಷ 1593 ರನ್ ಗಳಿಸಿದ್ದಾರೆ.

Pic credit: Google

ಸ್ಮೃತಿ ಮಂಧಾನ ಈ ವರ್ಷ ಏಕದಿನ ಪಂದ್ಯಗಳಲ್ಲಿ 4 ಶತಕ ಮತ್ತು 2 ಅರ್ಧ ಶತಕಗಳ ಸಹಾಯದಿಂದ 690 ರನ್ ಗಳಿಸಿದ್ದಾರೆ.

Pic credit: Google

ಮಂಧಾನ ಈ ವರ್ಷ ಟೆಸ್ಟ್‌ನಲ್ಲಿ 149 ರನ್ ಗಳಿಸಿದ್ದು, ಇದರಲ್ಲಿ ಶತಕವೂ ಸೇರಿದೆ. ಅದೇ ಸಮಯದಲ್ಲಿ, ಟಿ 20 ಯಲ್ಲಿ ಅವರು 8 ಅರ್ಧ ಶತಕಗಳನ್ನು ಒಳಗೊಂಡಂತೆ 763 ರನ್ ಗಳಿಸಿದ್ದಾರೆ.

Pic credit: Google