18-06-2024

ಹುಟ್ಟುಹಬ್ಬದ ಆಚರಣೆಗೆ 6298 ಕಿ.ಮೀ ಪ್ರಯಾಣ ಬೆಳೆಸಿದ ಸುರೇಶ್ ರೈನಾ

ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಸದ್ಯ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಗೊತ್ತೇ ಇದೆ.

ಪ್ರಸ್ತುತ ಟಿ20 ವಿಶ್ವಕಪ್​ ವೇಳೆ ವಿಶ್ಲೇಷಣಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರೈನಾ ಪತ್ನಿಯ ಹುಟ್ಟುಹಬ್ಬವನ್ನು ಆಚರಿಸಲು 6298 ಕಿ.ಮೀ ಪ್ರಯಾಣ ಬೆಳೆಸಿದ್ದಾರೆ.

ಜೂನ್ 18 ರಂದು ರೈನಾ ಅವರ ಪತ್ನಿ ಪ್ರಿಯಾಂಕಾ ಅವರ 38ನೇ ಹುಟ್ಟುಹಬ್ಬ. ಇದಕ್ಕಾಗಿ ರೈನಾ ದಂಪತಿ ಯುರೋಪ್​ಗೆ ತೆರಳಿದ್ದಾರೆ.

ಭಾರತದಿಂದ 6298 ಕಿ.ಮೀ ದೂರದಲ್ಲಿರುವ ಆಸ್ಟ್ರೀಯಾದ ವಿಯೆನ್ನಾದಲ್ಲಿ ಮಕ್ಕಳೊಂದಿಗೆ ರೈನಾ ಪ್ರಿಯಾಂಕಾ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈ ಸಂತಸ ಕ್ಷಣಗಳ ವಿಡಿಯೋ ಮತ್ತು ಫೋಟೋಗಳ ಮೂಲಕ ಸುರೇಶ್ ರೈನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಖಾಸಗಿ ವಿಮಾನದಲ್ಲಿ ಮಕ್ಕಳು ಹಾಗೂ ಪತ್ನಿಯೊಂದಿಗೆ ತೆರಳಿರುವ ಫೋಟೋಗಳನ್ನು ಸುರೇಶ್ ರೈನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಇದೇ ವೇಳೆ ರೋಮ್​ಗೂ ಭೇಟಿ ನೀಡಿರುವ ರೈನಾ ದಂಪತಿ ಅಲ್ಲಿನ ಸುಂದರ ತಾಣಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.

ಟೀಮ್ ಇಂಡಿಯಾ ಪರ ಮೂರು ಸ್ವರೂಪಗಳಲ್ಲೂ ಕಣಕ್ಕಿಳಿದಿರುವ ರೈನಾ ಒಟ್ಟು 7987 ರನ್ ಕಲೆಹಾಕಿದ್ದಾರೆ. 2022 ರಲ್ಲಿ ಸುರೇಶ್ ರೈನಾ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.