ಪ್ಯಾರಾಲಿಂಪಿಕ್ ಪದಕ ವಿಜೇತೆ ದೀಪ್ತಿಗೆ ಪ್ರಶಸ್ತಿಗಳ ಸುರಿಮಳೆ

08 september 2024

Pic credit: Google

ಪೃಥ್ವಿ ಶಂಕರ

Pic credit: Google

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಅಥ್ಲೀಟ್‌ಗಳು ಒಟ್ಟು 29 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

Pic credit: Google

ಇನ್ನು ಇದೇ ಕ್ರೀಡಾಕೂಟದಲ್ಲಿ ಮಹಿಳೆಯರ 400 ಮೀಟರ್ ಟಿ20 ವಿಭಾಗದಲ್ಲಿ ದೀಪ್ತಿ ಜೀವನ್​ಜಿ 55.82 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ಗೆದ್ದರು.

Pic credit: Google

ಈ ಪದಕ ಗೆದ್ದು ದೇಶಕ್ಕೆ ಮರಳಿದ ನಂತರ ದೀಪ್ತಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದ್ದು, ಆ ಬಳಿಕ ದೀಪ್ತಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದರು.

Pic credit: Google

ದೀಪ್ತಿ ಹಾಗೂ ಅವರ ಕುಟುಂಬಸ್ಥರು ಮತ್ತು ತರಬೇತುದಾರರು ಹೈದರಾಬಾದ್‌ನಲ್ಲಿರುವ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದರು.

Pic credit: Google

ಇದೇ ವೇಳೆ ದೀಪ್ತಿ ಅವರನ್ನು ಸನ್ಮಾನಿಸಿದ ಸಿಎಂ ರೇವಂತ್ ರೆಡ್ಡಿ, 1 ಕೋಟಿ ರೂ. ಬಹುಮಾನ ನೀಡಿದಲ್ಲದೆ, ವಾರಂಗಲ್‌ನಲ್ಲಿ ಮನೆ ಕಟ್ಟಿಕೊಳ್ಳಲು ಜಾಗ ಹಾಗೂ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದರು.

Pic credit: Google

ದೀಪ್ತಿ ಮಾತ್ರವಲ್ಲದೆ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮತ್ತು ಅವರ ಕೋಚ್ ಎನ್ ರಮೇಶ್ ಅವರಿಗೆ ಸಿಎಂ ರೆಡ್ಡಿ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದಾರೆ.