ವಿವಿದ ಕ್ರೀಡೆಗಳಲ್ಲಿನ ಅತಿ ಎತ್ತರದ ಟಾಪ್ 10 ಕ್ರೀಡಾಪಟುಗಳ ವಿವರ ಇಲ್ಲಿದೆ.

30 October 2023

ಮರಿಯಾ ಶರಪೋವಾ: 6’2 ಅಡಿ ಎತ್ತರವಿರುವ ಮರಿಯಾ ಶರಪೋವಾ ವೃತ್ತಿಪರ ಟೆನಿಸ್ ಆಟಗಾರ್ತಿಯಾಗಿದ್ದು, ಮಹಿಳೆಯರ ಸಿಂಗಲ್ಸ್‌ನಲ್ಲಿ 5 ಬಾರಿ ಗ್ರ್ಯಾಂಡ್​ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.

ಮೈಕೆಲ್ ಫೆಲ್ಪ್ಸ್ : 6'4 ಅಡಿ ಎತ್ತರವಿರುವ ಮೈಕೆಲ್ ಫೆಲ್ಪ್ಸ್ ಈಜಿನಲ್ಲಿ 28 ಒಲಿಂಪಿಕ್ ಪದಕ ಗೆದ್ದ ವಿಶ್ವ ದಾಖಲೆ ಬರೆದಿದ್ದಾರೆ. ಫೆಲ್ಪ್ಸ್ ಎತ್ತರವಲ್ಲದೆ ಬೃಹತ್ ಗಾತ್ರಕ್ಕೂ ಹೆಸರುವಾಸಿಯಾಗಿದ್ದಾರೆ.

ಉಸೇನ್ ಬೋಲ್ಟ್ - 100 ಮೀಟರ್ ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿದ ಒಲಂಪಿಕ್ಸ್ ಹೀರೋ ಉಸೇನ್ ಬೋಲ್ಟ್ 6 ಅಡಿ 5 ಇಂಚುಗಳಷ್ಟು ಎತ್ತರವಿದ್ದಾರೆ. ಬೋಲ್ಟ್ 11 ಬಾರಿ ವಿಶ್ವ ಚಾಂಪಿಯನ್‌ಶಿಪ್ ವಿಜೇತರಾಗಿದ್ದಾರೆ.

ಬಿಗ್ ಶೋ: ಡಬ್ಲ್ಯುಡಬ್ಲ್ಯುಇನಲ್ಲಿ ಬಿಗ್ ಶೋ ಎಂದೇ ಖ್ಯಾತರಾಗಿರುವ ಪೌಲ್ ಡೊನಾಲ್ಡ್ ವಿಟ್ II ಬರೋಬ್ಬರಿ 7 ಅಡಿ ಎತ್ತರವಿದ್ದು, 383 ಪೌಂಡು ತೂಕವಿದ್ದಾರೆ.

ಮೊಹಮ್ಮದ್ ಇರ್ಫಾನ್: 7'1 ಅಡಿ ಎತ್ತರವಿರುವ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಮೊಹಮ್ಮದ್ ಇರ್ಫಾನ್, ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಕ್ರಿಕೆಟರ್.

ಅಲೆಕ್ಸಿ ಕಜಕೋವ್ - ರಷ್ಯಾದ ವಾಲಿಬಾಲ್ ಆಟಗಾರ ಅಲೆಕ್ಸಿ ಕಜಕೋವ್ 7'2 ಅಡಿ ಎತ್ತರವಿದ್ದು, ಕಜಕೋವ್ ಒಲಿಂಪಿಕ್​ನಲ್ಲಿಯೂ ತಮ್ಮ ತಂಡವನ್ನು ಪ್ರತಿನಿಧಿಸಿದ್ದಾರೆ.

ದಿ ಗ್ರೇಟ್ ಖಲಿ: 7'2 ಅಡಿ ಎತ್ತರವಿರುವ ಭಾರತದ ದಲೀಪ್ ಸಿಂಗ್ ರಾಣಾ ಅಥವಾ ದಿ ಗ್ರೇಟ್ ಖಲಿ WWE ಇತಿಹಾಸದಲ್ಲಿ ನಾಲ್ಕನೇ ಎತ್ತರದ ಕುಸ್ತಿಪಟು ಆಗಿದ್ದಾರೆ.

ಹಶೀಮ್ ಥಬೀತ್: 1987 ರಲ್ಲಿ ತಾಂಜಾನಿಯಾದ ದಾರ್ ಎಸ್ ಸಲಾಮ್‌ನಲ್ಲಿ ಜನಿಸಿದ ಹಶೀಮ್ ಥಬೀತ್ 7'3 ಅಡಿ ಎತ್ತರವಿದ್ದು, ಬ್ಯಾಸ್ಕೆಟ್‌ಬಾಲ್​ನಲ್ಲಿ ಖ್ಯಾತಿ ಹೊಂದಿದ್ದಾರೆ.

ಯಾವೋ ಮಿಂಗ್: ಚೈನೀಸ್ ಬ್ಯಾಸ್ಕೆಟ್‌ಬಾಲ್ ತಾರೆ ಯಾವೋ ಮಿಂಗ್, 7 ಅಡಿ 6 ಇಂಚುಗಳಷ್ಟು ಎತ್ತರವಿದ್ದರು. ಒಂದು ಹಂತದವರೆಗೆ ಎನ್​ಬಿಎನಲ್ಲಿ ಅತಿ ಎತ್ತರದ ಸಕ್ರಿಯ ಆಟಗಾರರಾಗಿದ್ದರು.

ಮನುಟ್ ಬೋಲ್ : ಎನ್​ಬಿಎ ಲೋಕದ ಅತ್ಯಂತ ಎತ್ತರದ ಆಟಗಾರರಲ್ಲಿ 7’7 ಅಡಿ ಎತ್ತರವಿರುವ ಸುಡಾನ್‌ ಮನುಟೆ ಬೋಲ್ ಕೂಡ ಒಬ್ಬರಾಗಿದ್ದಾರೆ. ಅಚ್ಚರಿಯೆಂದರೆ ಮುನುಟ್ ಅವರ ಮುತ್ತಜ್ಜ ಕೂಡ 7'10 ಅಡಿ ಎತ್ತರವಿದ್ದರು.