ಐಪಿಎಲ್‌ನಲ್ಲಿ ಶತಕ ಬಾರಿಸದ ಭಾರತದ ಐವರು ದಿಗ್ಗಜ ಬ್ಯಾಟರ್​ಗಳಿವರು

23 september 2024

Pic credit: Google

ಪೃಥ್ವಿ ಶಂಕರ

Pic credit: Google

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಐಪಿಎಲ್‌ನಲ್ಲಿ ಆಡಿದ 264 ಪಂದ್ಯಗಳಲ್ಲಿ 95 ಬಾರಿ ಅಜೇಯರಾಗಿ 5243 ರನ್ ಗಳಿಸಿದ್ದಾರೆ.

Pic credit: Google

ಧೋನಿ ಐಪಿಎಲ್‌ನಲ್ಲಿ 24 ಅರ್ಧಶತಕಗಳನ್ನು ಸಿಡಿಸಿದ್ದಾರೆ ಆದರೆ ಅವರು ಒಂದೇ ಒಂದು ಶತಕವನ್ನು ಬಾರಿಸಲಿಲ್ಲ. ಐಪಿಎಲ್‌ನಲ್ಲಿ ಅವರ ಗರಿಷ್ಠ ರನ್ 84 ಆಗಿದೆ.

Pic credit: Google

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಐಪಿಎಲ್​ನಲ್ಲಿ ಆಡಿದ 154 ಪಂದ್ಯಗಳಲ್ಲಿ 4217 ರನ್ ಗಳಿಸಿದ್ದಾರೆ.

Pic credit: Google

ಗಂಭೀರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 36 ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಅವರಿಗೆ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗಲಿಲ್ಲ. ಐಪಿಎಲ್‌ನಲ್ಲಿ ಅವರ ಗರಿಷ್ಠ ರನ್ 93 ಆಗಿದೆ.

Pic credit: Google

ಯುವರಾಜ್ ಸಿಂಗ್ ಐಪಿಎಲ್‌ನಲ್ಲಿ ಆಡಿದ 132 ಪಂದ್ಯಗಳಲ್ಲಿ 129.71 ಸ್ಟ್ರೈಕ್ ರೇಟ್‌ನಲ್ಲಿ 2750 ರನ್ ಗಳಿಸಿದ್ದಾರೆ.

Pic credit: Google

ಐಪಿಎಲ್‌ನಲ್ಲಿ 13 ಅರ್ಧ ಶತಕಗಳನ್ನು ಬಾರಿಸಿರುವ ಯುವರಾಜ್ ಅವರ ಅತ್ಯಧಿಕ ಸ್ಕೋರ 89 ರನ್​ಗಳಾಗಿದೆ.

Pic credit: Google

ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಐಪಿಎಲ್‌ನಲ್ಲಿ 205 ಪಂದ್ಯಗಳನ್ನಾಡಿದ್ದು 4952 ರನ್ ಗಳಿಸಿದ್ದಾರೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 27 ಅರ್ಧ ಶತಕಗಳನ್ನು ಬಾರಿಸಿರುವ ಉತ್ತಪ್ಪ ಒಂದೇ ಒಂದು ಶತಕ ಬಾರಿಸಲಿಲ್ಲ.

Pic credit: Google

ಮಾಜಿ ಆರ್​ಸಿಬಿ ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್‌ನ 257 ಪಂದ್ಯಗಳಲ್ಲಿ 135.36 ಸ್ಟ್ರೈಕ್ ರೇಟ್‌ನಲ್ಲಿ 4842 ರನ್ ಗಳಿಸಿದ್ದಾರೆ.

Pic credit: Google

ಈ ಅವಧಿಯಲ್ಲಿ, ಅವರು 22 ಅರ್ಧ ಶತಕಗಳನ್ನು ಬಾರಿಸಿದರಾದರೂ ಶತಕ ಸಿಡಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಐಪಿಎಲ್‌ನಲ್ಲಿ 97 ರನ್​ಗಳ ಗರಿಷ್ಠ ಇನ್ನಿಂಗ್ಸ್ ಆಡಿರುವ ಕಾರ್ತಿಕ್ 3 ರನ್​ಗಳಿಂದ ಶತಕ ವಂಚಿತರಾಗಿದ್ದರು.