IND vs SL: ಈ 7 ಭಾರತೀಯರಿಗೆ ಇದು ಮೊದಲ ಶ್ರೀಲಂಕಾ ಪ್ರವಾಸ

26  July 2024

Pic credit - Google

ಪೃಥ್ವಿಶಂಕರ

Pic credit -  Google

ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಭಾರತ ತಂಡ ಜುಲೈ 27 ರಿಂದ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಬಳಿಕ ಅಷ್ಟೇ ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಭಾರತ-ಶ್ರೀಲಂಕಾ

Pic credit -  Google

ಟಿ20 ಸರಣಿಗೆ ಆಯ್ಕೆಯಾಗಿರುವ ಭಾರತದ 15 ಆಟಗಾರರ ತಂಡದಲ್ಲಿ ಶ್ರೀಲಂಕಾ ನೆಲದಲ್ಲಿ ಮೊದಲ ಬಾರಿಗೆ 7 ಆಟಗಾರರು ಕಣಕ್ಕಿಳಿಯಲ್ಲಿದ್ದಾರೆ.

ಲಂಕಾದಲ್ಲಿ ಪಾದಾರ್ಪಣೆ

Pic credit -  Google

7 ಆಟಗಾರರ ಪೈಕಿ ಮೂವರು ಬೌಲರ್‌ಗಳು, ಇಬ್ಬರು ಆಲ್‌ರೌಂಡರ್‌ಗಳು ಮತ್ತು ಇಬ್ಬರು ಬ್ಯಾಟ್ಸ್‌ಮನ್‌ಗಳು ಸೇರಿದ್ದಾರೆ.

ಇವರೇ ಆ ಆಟಗಾರರು

Pic credit -  Google

ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 2019 ರಲ್ಲಿ ತಮ್ಮ ಚೊಚ್ಚಲ ಟಿ20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದರು. ಆದರೆ ಅವರು ಇಲ್ಲಿಯವರೆಗೆ ಶ್ರೀಲಂಕಾದಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ.

ಯಶಸ್ವಿ ಜೈಸ್ವಾಲ್

Pic credit -  Google

ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದಲ್ಲಿ ಟಿ20 ಪಾದಾರ್ಪಣೆ ಮಾಡಿದ ರಿಯಾನ್ ಪರಾಗ್ ಅವರು ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ, ಅವರು ಈ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ತಂಡಗಳ ಭಾಗವಾಗಿದ್ದಾರೆ.

ರಿಯಾನ್ ಪರಾಗ್

Pic credit -  Google

ಶಿವಂ ದುಬೆ ಇತ್ತೀಚೆಗೆ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಭಾಗವಾಗಿದ್ದಾರೆ. ಆದರೆ ಅವರು ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಆಡಲಿದ್ದಾರೆ.

ಶಿವಂ ದುಬೆ

Pic credit -  Google

ವೇಗದ ಬೌಲರ್ ಅರ್ಷದೀಪ್ ಸಿಂಗ್ ಕೂಡ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈಗ ಅವರು ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಲ್ಲಿದ್ದಾರೆ.

ಅರ್ಷದೀಪ್ ಸಿಂಗ್

Pic credit -  Google

ರವಿ ಬಿಷ್ಣೋಯ್ ತಮ್ಮ ಮೊದಲ ಟಿ20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿ 5 ವರ್ಷಗಳಾಗಿವೆ. ಆದರೆ, ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯವನ್ನು ಆಡಲಿದ್ದಾರೆ.

ರವಿ ಬಿಷ್ಣೋಯ್

Pic credit -  Google

ರಿಂಕು ಸಿಂಗ್ 2023 ರಲ್ಲಿ ಟಿ20 ಪಾದಾರ್ಪಣೆ ಮಾಡಿದ ನಂತರ 20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ.

ರಿಂಕು ಸಿಂಗ್

Pic credit -  Google

ಖಲೀಲ್ ಅಹ್ಮದ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ 6 ವರ್ಷಗಳು ಕಳೆದಿವೆ, ಅವರು 2018 ರಲ್ಲಿ ಟೀಂ ಇಂಡಿಯಾ ಪರ ತಮ್ಮ ಮೊದಲ ಪಂದ್ಯವನ್ನು ಆಡಿದರು. ಆದರೆ ಈಗ ಅವರು ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ.

ಖಲೀಲ್ ಅಹಮದ್