ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಬೃಹತ್ ಗುರಿ ಬೆನ್ನಟ್ಟಿದ ಟಾಪ್ 10 ತಂಡಗಳ ಪಟ್ಟಿ ಇಲ್ಲಿದೆ.

11 October 2023

ದಕ್ಷಿಣ ಆಫ್ರಿಕಾ: 2011ರ ವಿಶ್ವಕಪ್‌ನಲ್ಲಿ ಭಾರತ ನೀಡಿದ್ದ 297 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.

ಇಂಗ್ಲೆಂಡ್: 2007ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 301 ರನ್​ಗಳ ಗುರಿಯನ್ನು ಚೇಸ್ ಮಾಡಿತ್ತು.

ಐರ್ಲೆಂಡ್: 2015 ರ ವಿಶ್ವಕಪ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 305 ರನ್​ಗಳ ಗುರಿ ಮುಟ್ಟಿತ್ತು.

ಐರ್ಲೆಂಡ್: 2011ರ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ನೀಡಿದ್ದ 307 ರನ್​ಗಳ ಟಾರ್ಗೆಟ್ ಅನ್ನು ಚೇಸ್ ಮಾಡಿತ್ತು.

ಶ್ರೀಲಂಕಾ: 2015ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ನೀಡಿದ್ದ 310 ರನ್ ಗುರಿಯನ್ನು ಚೇಸ್ ಮಾಡಿತ್ತು.

ಶ್ರೀಲಂಕಾ: 1992ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ನೀಡಿದ್ದ 313 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.

ಬಾಂಗ್ಲಾದೇಶ: 2015ರ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ನೀಡಿದ್ದ 319 ರನ್ ಗುರಿಯನ್ನು ಚೇಸ್ ಮಾಡಿತ್ತು.

ಬಾಂಗ್ಲಾದೇಶ: 2019 ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 322 ರನ್​ಗಳನ್ನು ಬೆನ್ನಟ್ಟಿತ್ತು.

ಐರ್ಲೆಂಡ್: 2011ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ನೀಡಿದ್ದ 328 ರನ್​ಗಳ ಬೃಹತ್ ಗುರಿಯನ್ನು ಚೇಸ್ ಮಾಡಿತ್ತು.

ಪಾಕಿಸ್ತಾನ: ಇದೀಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಶ್ರೀಲಂಕಾ ನೀಡಿದ್ದ 345 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದೆ.